ಬಿ. ಶ್ರೀರಾಮುಲು ಬಿಜೆಪಿಯಿಂದ ಉಚ್ಛಾಟನೆ: ಈಶ್ವರಪ್ಪ
ಬೆಂಗಳೂರು,
ನ. 9: ಹಿರಿಯಣ್ಣ ಜೈಲಿನಲ್ಲಿದ್ದು ದಿಕ್ಕುತೋಚದಂತಾಗಿರುವ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಬಿಜೆಪಿ ಸಹವಾಸವೇ ಬೇಡವೆಂದು ಉಪ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸ ಬಯಸಿದ್ದಾರೆ. ಇದೇ ವೇಳೆ, ಶ್ರೀರಾಮುಲು ಪಕ್ಷೇತತರರಾಗಿ ಚುನಾವಣೆ ಕಣಕ್ಕಿಳಿದರೆ ತಕ್ಷಣ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಎಸ್. ಈಶ್ವರಪ್ಪ ಅವರು ಇದೀಗತಾನೆ ಘೋಷಿಸಿದ್ದಾರೆ. id="toptextpromo">ಈ
ಭೂಮಿ ಮೇಲೆ ಯಾವುದೇ ಬಿಜೆಪಿ ಕಾರ್ಯಕರ್ತ ಪಕ್ಷವನ್ನು ಧಿಕ್ಕರಿಸಿ, ಚುನಾವಣೆಯಲ್ಲಿ ಪಾಲ್ಗೊಂಡರೆ ಅವರನ್ನು ಮುಲಾಜಿಲ್ಲದೆ ಪಕ್ಷದಿಂದ ಉಚ್ಛಾಟಿಸುವ ಸಂಪ್ರದಾಯವಿದೆ. ಇದಕ್ಕೆ ಶ್ರೀರಾಮುಲು ಸಹ ಹೊರತಲ್ಲ. ಅವರು ನಾಮಪತ್ರ ಸಲ್ಲಿಸುತ್ತಿದ್ದಂತೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆದರೆ
ಈ ಶಿಸ್ತು ಕ್ರಮ ಯಾವ ಪ್ರಮಾಣದ್ದು, ಎಷ್ಟು ವರ್ಷ ಕಾಲ ಅವರನ್ನು ಉಚ್ಛಾಟಿಸಲಾಗುವದು? ಎಂಬೆಲ್ಲ ಪ್ರಶ್ನೆಗಳಿಗೆ ಈಶ್ವರಪ್ಪ ಉತ್ತರಿಸಿಲ್ಲ. ಈ ಮಧ್ಯೆ ಶ್ರೀರಾಮುಲು ತಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮುಕ್ತಿಗೊಳಿಸುವಂತೆ ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.











Click it and Unblock the Notifications