ಸಿಸಿಟಿವಿ ಆಫ್ : ಯಡ್ಡಿ ಶೋಭಾ ಏನ್ಮಾಡಿದ್ರು ಯಾವನಿಗೊತ್ತು?

ಇದರಲ್ಲಿ ತಪ್ಪು ಅರ್ಥ ಹುಡುಕಬೇಡಿ. ಶೋಭಾ ಅವರಷ್ಟೇ ಅಲ್ಲ ವಿವಿಐಪಿ ಖೈದಿ ಯಡಿಯೂರಪ್ಪ ಅವರನ್ನು ಯಾವೊಬ್ಬ ಸಂದರ್ಶಕರ ಭೇಟಿ ವಿವರಗಳು ದಾಖಲಾಗಿಲ್ಲ ಎಂದು ಪರಪ್ಪನ ಅಗ್ರಹಾರದ ಜೈಲು ದಾಖಲೆ ಪರಿಶೀಲಿಸಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.
ಬಯಲು ಬಂದೀಖಾನೆಯ ಮುಖ್ಯದ್ವಾರದಲ್ಲಿ ಒಂದು ಪವರ್ ಫುಲ್ ಸಿಸಿಟಿವಿ ಕೆಮೆರಾ ಇದೆ. ಇದು 360 ಡಿಗ್ರಿ ಫೋಕಸ್ ಮಾಡಬಲ್ಲುದು. ಇನ್ನೊಂದು ಸಂದರ್ಶಕರ ಆಗಮನ ನಿರ್ಗಮನದ ಮೇಲೆ ನಿಗಾ ಇಡಲು ಸ್ಥಾಪಿಸಲಾಗಿದೆ.
ಆದರೆ, ಶೋಭಾ ಹಾಗೂ ಯಡಿಯೂರಪ್ಪ ಅವರ ಭೇಟಿ ನಡೆದಿದ್ದು ಪೊಲೀಸ್ ಅಧಿಕಾರಿಗಳ ಕೊಠಡಿಯಲ್ಲಿ ಎನ್ನಲಾಗಿದೆ. ಸಂದರ್ಶಕರ ಕೊಠಡಿಯಲ್ಲಿ ನಡೆದಿದ್ದರೂ ಅಲ್ಲೂ ಸಿಸಿಟಿವಿ ಕೆಮೆರಾ ಆಫ್ ಆಗಿತ್ತಾದರಿಂದ ಇಬ್ಬರ ನಡುವಿನ ಮಾತುಕತೆಯಾಗಲಿ, ಯಾವಾಗ ಬಂದಿದ್ದು, ಯಾವಾಗ ಹೋಗಿದ್ದು ಏನ್ನುವುದಕ್ಕೆ ಸರಿಯಾದ ಮಾಹಿತಿ ಇಲ್ಲ.
ಯಡಿಯೂರಪ್ಪ ಅವರ ಜೊತೆಗೆ ಕಟ್ಟಾ ಫಾದರ್ ಅಂಡ್ ಸನ್ ಗೂ ಇದೆ ಸೌಲಭ್ಯ ಸಿಕ್ಕಿತ್ತು. ಸಿಸಿಟಿವಿ ಇಲ್ಲದಿರುವುದರಿಂದ ಯಾವಾವ ಡೀಲ್ ಆಯಿತು ಎಂಬುದು ಗೊತ್ತಾಗಿಲ್ಲ. ಭ್ರಷ್ಟಾಚಾರ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಬಹುದಾಗಿದ್ದ ಕೆಮೆರಾ ಫುಟೇಜ್ ಬೇಕೆಂತಲೆ ತೆಗೆದಿಲ್ಲ.
ಹೊಸದಾಗಿ ಎಂಟು ಸಿಸಿಟಿವಿ ಕೆಮೆರಾ ಅಳವಡಿಸಲು ಜೈಲು ಅಧಿಕಾರಿಗಳಿಗೆ ಸೂಚನೆ ಸಿಕ್ಕಿತ್ತು. ಆದರೆ, ಯಡಿಯೂರಪ್ಪ ಒಳಬಂದ ನಂತರ ಯಾವುದೂ ಸ್ಥಾಪಿಸಿಲ್ಲ. ಜೊತೆಗೆ ಇದ್ದ ಒಂದೆರಡು ಸಿಸಿಟಿವಿಯ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಈ ಬಗ್ಗೆ ಯಾರು ಪ್ರಶ್ನಿಸಿಲ್ಲ. ಯಡಿಯೂರಪ್ಪ ಏನು ಮಾಡಿದ್ರು ಎಂದು ಕೇಳಿದ್ರೆ ಯಾವನಿಗೊತ್ತು ಎಂಬ ಉತ್ತರ ಮಾತ್ರ ಸಿಗುತ್ತಿದೆ.












Click it and Unblock the Notifications