ಅಶೋಕಾ ದಿ ಗ್ರೇಟ್ ಗಿಂತ ಕುಮಾರಣ್ಣನೇ ಗ್ರೇಟ್: ಯಡ್ಡಿ ಕಿಡಿಕಿಡಿ

'ನಾನು ಜೈಲಿಗೆ ಹೋದಾಗ ನೀನು ಎಲ್ಲಿ ಪಾರ್ಟಿ ಮಾಡಿದ್ದೀಯಾ ಅಂತ ಗೊತ್ತು. ಸಿಂಪತಥಿ ತೋರಿಸೋಕೆ ಈಗ ಬಂದೆಯಾ? ನಿನಗಿಂತ ಆ ಕುಮಾರಸ್ವಾಮಿಯೇ ಗ್ರೇಟು. ದಯವಿಟ್ಟು...' ಎಂದು ಯಡಿಯೂರಪ್ಪ ಅವರು ಮನೆಗೆ ಬಂದ ಒಲ್ಲದ ಅತಿಥಿಯನ್ನು ಹೊರಹಾಕಿದ್ದಾರೆ.
'ಸಾರಿ ಸರ್. ನಿಮಗೆ ಯಾರೋ ಸುಳ್ಳು ಹೇಳಿದ್ದಾರೆ. ನಾನು ಹಾಗೆಲ್ಲ ಮಾಡಿಲ್ಲ' ಎಂದು ಸಮಜಾಯಿಷಿ ನೀಡಲು ಸಚಿವ ಅಶೋಕ್ ಯತ್ನಿಸಿದರು. ಇದರಿಂದ ಮತ್ತಷ್ಟು ಕೆರಳಿ ನಿಂತ ಯಡಿಯೂರಪ್ಪ ಅವರು 'ನಿನಗೆ ಗೃಹ, ಸಾರಿಗೆ ಅಂತಹ ಪ್ರಭಾವಿ ಖಾತೆ ವಹಿಸಿಕೊಟ್ಟೆ. ನಾನು ಜೈಲಿಗೆ ಹೋದಾಗ ನೀನು ಎಲ್ಲಿ, ಏನು ಮಾಡಿದೆ ಎಂಬುದರ ವಿವರ ಕೊಡ್ಲಾ ' ಎಂದು ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದಿದೆ.
'ಅಡ್ವಾಣಿ ಸಭೆಗೆ ಹೋಗದೆ ಇದ್ದವರಿಗೆ ನೋಟಿಸ್ ನೀಡಲು ಈಶ್ವರಪ್ಪಗೆ ತಿದಿ ಒತ್ತಿದೆಯಾ? ಎಲ್ಲ ಗೊತ್ತು ನಡಿ' ಎನ್ನುತ್ತಿದ್ದಂತೆ ಕೈಮುಗಿದು ಎದ್ದು ನಿಂತ ಅಶೋಕ ಮಹಾರಾಜರು ಸಾಲು ಮರಗಳ ರಸ್ತೆಯಲ್ಲಿ ಪೆಚ್ಚು ಮೋರೆ ಹಾಕಿಕೊಂಡು ವಾಪಸಾದರು.












Click it and Unblock the Notifications