ಬಳ್ಳಾರಿ ಬಿಜೆಪಿ ಕಚೇರಿ ಮೇಲೆ ಬೆಳ್ಳಂಬೆಳಗ್ಗೆ ಬಂಡಾಯದ ಬಾವುಟ ಹಾರಾಟ!

ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಅರ್ಥಾತ್ ಶ್ರೀರಾಮುಲು ಬೆಂಬಲಿಗರು ಬಂಡಾಯ ಬಾವುಟ ಹಾರಿಸಿದ್ದಾರೆ. ಅಂದರೆ ಪಕ್ಷದ ಬಾವುಟದ ಬಣ್ಣ, ರಚನೆ, ಸ್ವರೂಪ ಶ್ರೀರಾಮುಲುಗೆ ಸಹಾಯಕವಾಗುವಂತೆ ಹೊಸ ರೂಪದಲ್ಲಿ ರಾರಾಜಿಸಿದೆ.
ಅಡ್ಡಡ್ಡವಾಗಿ ಕೇಸರಿ ಮತ್ತು ಹಸಿರು ಬಣ್ಣದ ನಂತರ ಕೆಳಗೆ ನೇರಳೆ ಬಣ್ಣ ಮೂಡಿದ್ದು, ಅದರ ಮೇಲೆ ಶ್ರೀರಾಮುಲು ಹಸನ್ಮುಖ ಚಿತ್ರ ಕಂಗೊಳಿಸುತ್ತಿದೆ. ಅದರಲ್ಲಿ 'ಸ್ವಾಭಿಮಾನಿ ಶ್ರೀರಾಮುಲು' ಅಕ್ಷರಗಳೂ ಇವೆ.
ಪಕ್ಷದ ಕಾರ್ಯಕರ್ತರು ಬುಧವಾರ ಬೆಳಗ್ಗೆ ಈ ಹೊಸ ಬಾವುಟ ಹಾರಿಸಿ, ಸಂಭ್ರಮಿಸಿದ್ದಾರೆ. ರಾಜಕೀಯ ಪರಿಭಾಷೆಯಲ್ಲಿ ಬಂಡಾಯದ ಬಾವುಟ ಅಂದರೆ ಇದೇನಾ!? ಎಂದು ಬಿಜೆಪಿಯ ನಿಜವಾದ ಕಾರ್ಯಕರ್ತರು ತಲೆಯ ಮೇಲೆ ಕೈಹೊತ್ತುಕುಳಿತಿದ್ದಾರೆ.












Click it and Unblock the Notifications