ಗಂಗಾವತಿ ಸಮ್ಮೇಳನಕ್ಕೆ ಸಿಪಿ ಕೃಷ್ಣಕುಮಾರ್ ಅಧ್ಯಕ್ಷ

ಸಿಪಿಕೆ ಎಂದೇ ಜನಜನಿತರಾಗಿರುವ ನೃಪತುಂಗ ಪ್ರಶಸ್ತಿ ವಿಜೇತ, ಮೈಸೂರು ಮೂಲದ ಸಾಹಿತಿ, ವಿಮರ್ಶಕ ಸಿ.ಪಿ. ಕೃಷ್ಣಕುಮಾರ್ ಅವರನ್ನು ಸಮ್ಮೇಳನದ ಅಧ್ಯಕ್ಷರಾಗಿ ನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಾಹಿತಿ ಎಂಎಂ ಕಲ್ಬುರ್ಗಿ ಹಾಗೂ ಉಷಾ ಪಿ ರೈ ಅವರ ಹೆಸರು ಮುಂಚೂಣಿಯಲ್ಲಿತ್ತು. ಇವರ ಜೊತೆಗೆ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಗಿರೀಶ್ ಕಾರ್ನಡ್, ಚಂದ್ರಶೇಖರ ಕಂಬಾರ, ಡಾ. ಚಿದಾನಂದ ಮೂರ್ತಿ, ಹಂಪಾ ನಾಗರಾಜಯ್ಯ ಹಾಗೂ ಕೋ. ಚನ್ನಬಸಪ್ಪ ಸೇರಿದಂತೆ ಸುಮಾರು 15 ಜನ ಸಾಹಿತಿಗಳ ಹೆಸರನ್ನು ಪರಿಗಣಿಸಲಾಗಿತ್ತು ಎಂದು ನಲ್ಲೂರು ಪ್ರಸಾದ್ ಅವರು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕದ ಭಾಗಕ್ಕೆ ಅವಕಾಶ ಒದಗಿಸಿಕೊಡುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಗೆ ಈ ಬಾರಿ ಸಮ್ಮೇಳನ ನೀಡುವ ಅವಕಾಶ ದೊರೆತಿದೆ. 1992 ರಲ್ಲಿ ಸಿಂಪಿ ಲಿಂಗಣ್ಣ ಅವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ನಂತರ ಕೊಪ್ಪಳ ಜಿಲ್ಲಾಕೇಂದ್ರವಾಗಿ ಹೈದರಾಬಾದ್ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿ ಬೆಳಸುವ ಪ್ರಮುಖ ವೇದಿಕೆಯಾಗಿ ಬೆಳೆದಿದೆ.












Click it and Unblock the Notifications