ಪ್ರಾಂಶುಪಾಲರಿಂದ ಅತ್ಯಾಚಾರ: 10 ಲಕ್ಷ ಪರಿಹಾರಕ್ಕೆ ಹೈಕೋರ್ಟ್ ಆದೇಶ

ಬಾಲಕಿಯ ಕುಟುಂಬ ಮತ್ತು ತ್ರಿಪುರಾ ಮಹಿಳಾ ಆಯೋಗ ಜಂಟಿಯಾಗಿ ಸಚಿವಾಲಯದಿಂದ 50 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಬಳಿಕ ನ್ಯಾಯಮೂರ್ತಿ ಅರುಣ್ ಚಂದ್ರ ಉಪಾಧ್ಯಾಯ ಅವರು ಈ ಆದೇಶ ನೀಡಿದರು.
ಬಾಲಕಿಯು 1998ರಲ್ಲಿ ದಕ್ಷಿಣ ತ್ರಿಪುರಾ ಜಿಲ್ಲೆಯ ಕಕ್ರಬನ್ ನಲ್ಲಿನ ಜವಾಹರ ನವೋದಯ ವಿದ್ಯಾಲಯದಲ್ಲಿ 8ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಗ ಪ್ರಾಂಶುಪಾಲ ಎಚ್.ಎಸ್. ತಿವಾರಿಯಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು. ಈ ಘಟನೆಯ ಬಳಿಕ ಆಕೆ ಮಗುವಿಗೆ ಜನ್ಮ ನೀಡಿದ್ದಳು.
ಈ ಅಪರಾಧಕ್ಕಾಗಿ ದಕ್ಷಿಣಾ ತ್ರಿಪುರಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನೀಡಿದ್ದ ಜೀವಾವಧಿ ಸಜೆಯನ್ನು ಗುವಾಹತಿ ಹೈಕೋರ್ಟ್ 2005ರಲ್ಲಿ ಎತ್ತಿ ಹಿಡಿದಿದ್ದು, ತಿವಾರಿ ಪ್ರಸ್ತುತ ಶಿಕ್ಷೆ ಅನುಭವಿಸುತ್ತಿದ್ದಾನೆ.











Click it and Unblock the Notifications