ಸುಪ್ರೀಂಕೋರ್ಟ್ 'ನೋ' ಅಂದ್ರೆ ಯಡಿಯೂರಪ್ಪಗೆ ಜೈಲು ಕಟ್ಟಿಟ್ಟಬುತ್ತಿ

ದೂರುದಾರ ಸಿರಾಜಿನ್ ಬಾಷಾ ಅವರು ಹೈಕೋರ್ಟಿನ ಏಕ ಸದಸ್ಯ ನ್ಯಾಯಪೀಠವು ಯಡಿಯೂರಪ್ಪಗೆ ಜಾಮೀನು ಮಂಜೂರು ಮಾಡಿರುವುದನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಲು ನಿರ್ಧರಿಸಿದ್ದಾರೆ. ಒಂದು ವೇಳೆ ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿದರೆ ಯಡ್ಡಿಗೆ ಮತ್ತೆ ಜೈಲೇ ಗತಿ.
ಮೊದಲೇ ಸುಪ್ರೀಂಕೋರ್ಟ್ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಇತ್ತೀಚೆಗೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಜತೆಗೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಷ್ಟು ಸುಲಭವಾಗಿ ಜಾಮೀನು ನೀಡಬಾರದು ಎಂದೂ ತಾಕೀತು ಮಾಡಿದೆ. ಇದು ಯಡಿಯೂರಪ್ಪಗೆ ಪ್ರತಿಕೂಲವಾಗಬಹುದು.
ಗಮನಾರ್ಹವೆಂದರೆ ಹೈಕೋರ್ಟ್ ಪೀಠ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ದೂರುದಾರರ ವಿರುದ್ಧ ಇದೇ ರೀತಿ ಆದೇಶ ಹೊರಡಿಸಿದಾಗ ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲೇಖಿಸಿ ರಾಜ್ಯ ಲೋಕಾಯುಕ್ತ ಕೋರ್ಟ್ ನ್ಯಾಯಾಧೀಶರು ಹೈಕೋರ್ಟ್ ಪೀಠಕ್ಕೆ ಛೀಮಾರಿ ಹಾಕಿದ್ದರು. ಈಗಲೂ ಅಷ್ಟೆ. ಸುಪ್ರೀಂಕೋರ್ಟ್ ಸಿರಾಜಿನ್ ಬಾಷಾ ಮೇಲ್ಮನವಿ ಅರ್ಜಿಯನ್ನು ಕೈಗೆತ್ತಿಕೊಂಡು ಅದನ್ನು ಪುರಸ್ಕರಿಸಿದರೆ ಯಡಿಯೂರಪ್ಪ ತಕ್ಷಣ, ಮತ್ತೆ, ಸೀದಾ ಪರಪ್ಪನ ಅಗ್ರಹಾರ ಜೈಲು ಸೇರಬೇಕಾಗುತ್ತದೆ.












Click it and Unblock the Notifications