ಬೇಲ್ ಮಂಜೂರು:ಯಡಿಯೂರಪ್ಪ, ಶೆಟ್ಟಿ ಜೈಲು ವನವಾಸ ಅಂತ್ಯ
ಬೆಂಗಳೂರು,
ನ. 8: ಯಡಿಯೂರಪ್ಪ ಅಭಿಮಾನಿಗಳಿಗೆ ಒಂದು ಪಿಂಟ್ ಸಿಹಿ ಸುದ್ದಿ ಲಭ್ಯವಾಗಿದೆ. ಜಮೀನು ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಚಿವ ಕೃಷ್ಣಯ್ಯಶೆಟ್ಟಿ ಅವರ ಜೈಲು ವನವಾಸ ಇಂದಿಗೆ (ಮಂಗಳವಾರ) ಮುಗಿಯಲಿದೆ. ಇದರೊಂದಿಗೆ ವಿಚಾರಣಾಧೀನ ಕೈದಿ ನಂ. 10462 ಸಂಖ್ಯೆಯಿಂದ ಯಡಿಯೂರಪ್ಪಗೆ ಮುಕ್ತಿ ದೊರಕಿದಂತಾಗಿದೆ. ಅ. 15ರಿಂದ ಇಬ್ಬರೂ ಜೈಲುವಾಸಿಗಳಾಗಿದ್ದರು. id="toptextpromo">ರಾಚೇನಹಳ್ಳಿ
ಹಾಗೂ ಉತ್ತರಹಳ್ಳಿ ಜಮೀನು ಜಮೀನು ಡಿ ನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿರಾಜಿನ್ ಬಾಷಾ ಸಲ್ಲಿಸಿದ್ದ 3ನೇ ಖಾಸಗಿ ದೂರಿಗೆ ಸಂಬಂಧಿಸಿದ ಜಾಮೀನು ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಬಿ.ವಿ. ಪಿಂಟೋ, ಯಡಿಯೂರಪ್ಪ ಹಾಗೂ ಕೃಷ್ಣಯ್ಯ ಶೆಟ್ಟಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದ್ದರು. ಇದರಿಂದಾಗಿ ಯಡಿಯೂರಪ್ಪ ಹಾಗೂ ಕೃಷ್ಣಯ್ಯ ಶೆಟ್ಟಿಯವರಿಗೆ ಜೈಲಿನಿಂದ ಮುಕ್ತಿ ದೊರೆತಿದೆ. id='are-slot-1' class='oiad oi-axt oiadv'> id='top-searched-articles'>ಇನ್ನೊಂದೆಡೆ
ಯಡಿಯೂರಪ್ಪರ ವಿರುದ್ಧ ಸಿರಾಜಿನ್ ಬಾಷಾ ಸಲ್ಲಿಸಿದ 1,4 ಮತ್ತು 5ನೆ ಖಾಸಗಿ ದೂರಿಗೆ ಸಂಬಂಧಿಸಿದ ಜಾಮೀನು ಅರ್ಜಿಯ ವಿಚಾರಣೆಯೂ ಹೈಕೋರ್ಟ್‌ನ ಏಕ ಸದಸ್ಯ ಪೀಠದಲ್ಲಿ ನಡೆಯುತ್ತಿದೆ.











Click it and Unblock the Notifications