ರಸ್ತೆ ಮೇಲೆ ಹೆಲಿಕಾಪ್ಟರ್ ಇಳಿಸಿ ನಮಾಜ್ ಮಾಡಿದ ಸೈನಿಕರು

ಇತ್ತೀಚೆಗೆ ಏನಾಯಿತೆಂದರೆ ಸೌದಿ ಅರೇಬಿಯಾದಲ್ಲಿ ನಮಾಜ್ ಸಮಯ ಸಮೀಪಿಸುತ್ತಿದ್ದಂತೆ ಆಕಾಶ ಮಾರ್ಗದಲ್ಲಿದ್ದ ಈ ಸೇನಾ ಹೆಲಿಕಾಪ್ಟರ್ ತನ್ನ ಹಾರಾಟ ಸ್ಥಗಿತಗೊಳಿಸಿ, ರಸ್ತೆ ಬದಿ ಇಳಿದಿದೆ. ಅದರಲ್ಲಿದ್ದ ಸೈನಿಕರು ಸರಸರನೆ ಇಳಿದವರೆ ನಮಾಜ್ ಮಾಡತೊಡಗಿದ್ದಾರೆ. ಈ ದೃಶ್ಯವನ್ನು ಸೌದಿ ಅರೇಬಿಯಾದ ಅಲ್ ಸಬಕ್ ದಿನಪತ್ರಿಕೆ ಪ್ರಕಟಿಸಿದೆ.
ರಿಯಾದ್ ಸಮೀಪ ನಿರ್ಜನ ರಸ್ತೆಯಲ್ಲಿ ಹೆಲಿಕಾಪ್ಟರುಗಳನ್ನು ನಿಲ್ಲಿಸಿದ ಈ ಸೈನಿಕರು ನಮಾಜ್ ಮಾಡುತ್ತಿದ್ದ ದೃಶ್ಯ ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಪತ್ರಿಕೆಯ ಫೋಟೋಗ್ರಾಫರ್ ಕಣ್ಣಿಗೆ ಬಿದ್ದಿದೆ. ಛಕ್ ಅಂತ ಆತ ಫೋಟೊ ಕ್ಲಿಕ್ಕಿಸಿದ್ದಾನೆ ಅಷ್ಟೆ.
'ಬಿಸಿಲ ಬೇಗೆಯ ನಡುವೆ ಡಾಂಬರು ರಸ್ತೆಯಲ್ಲಿ ವಾಯುಪಡೆಯ ಸೈನಿಕರು ಅಲ್ಲಾಹುವಿಗೆ ಸಾಷ್ಟಾಂಗ (ಸುಜೂದ್) ನಿರ್ವಹಿಸುತ್ತಿರುವ ದೃಶ್ಯವನ್ನು ತಮ್ಮ ಛಾಯಾಗ್ರಾಹಕ ಸೆರೆಹಿಡಿದ್ದಾರೆ. ಈ ಸೇನಾ ಹೆಲಿಕಾಪ್ಟರಿನಲ್ಲಿ ಪ್ರಯಾಣಿಸುತ್ತಿದ್ದ ಸೈನಿಕರು ನಮಾಜ್ ಸಮಯವಾದ ಕಾರಣ ಮಾರ್ಗ ಮಧ್ಯೆ ಹೆಲಿಕಾಪ್ಟರ್ ಇಳಿಸಿ ನಮಾಜ್ ನಿರ್ವಹಿಸಿ ತಮ್ಮ ಧಾರ್ಮಿಕ ಶ್ರದ್ಧೆಯನ್ನು ತೋರಿದ್ದಾರೆ' ಎಂದು ಪತ್ರಿಕೆ ಹೇಳಿದೆ.












Click it and Unblock the Notifications