ಬೆಳಗಾವಿ ಬಂದ್ : ಮರಾಠಿಗರಿಂದಲೇ ನೀರಸ ಸ್ಪಂದನೆ

ಕನ್ನಡಿಗರನ್ನು ಗೂಂಡಾ ಎಂದು ಮೇಯರ್ ಮಂದಾ ಬಾಳೆಕುಂದ್ರಿ ಕರೆದಿದ್ದಕ್ಕೆ ರೊಚ್ಚಿಗೆದ್ದಿದ್ದ ಕನ್ನಡ ಕಾರ್ಯಕರ್ತರು ಮೇಯರ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದರು. ಪೊಲೀಸರು ಸುಮಾರು 30 ಕರವೇ ಕಾರ್ಯಕರ್ತರನ್ನು ಗುರುವಾರ ಬಂಧಿಸಿದ್ದರು.
ಬುಧವಾರ ಕೆಲ ಬಸ್ಸುಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಇಂದು ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿದ್ದವು. ಮರಾಠಿ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಕೆಲ ಅಂಗಡಿಗಳು ಮುಚ್ಚಿದ್ದು ಬಿಟ್ಟರೆ ಜನಜೀವನ ಎಂದಿನಂತೆ ಸಹಜವಾಗಿತ್ತು.
ಶಾಲಾ, ಕಾಲೇಜು, ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿವೆ. ಮಾರುಕಟ್ಟೆ ಸೇರಿದಂತೆ ನಗರದಾದ್ಯಂತ ಜನ ಓಡಾಟ ಎಂದಿನಂತಿತ್ತು. ಮುಂಜಾಗ್ರತಾ ಕ್ರಮವಾಗಿ 40ರಿಂದ 50 ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಯಾವುದೇ ಪ್ರದೇಶದಲ್ಲಿ ಅವಘಡ ಸಂಭವಿಸಿದ ವರದಿ ಬಂದಿಲ್ಲ.
ಈ ನಡುವೆ, ಕರ್ನಾಟಕದಲ್ಲಿದ್ದುಕೊಂಡು ಕನ್ನಡಕ್ಕೆ ಅವಮಾನ ಮಾಡಿ ಮತ್ತು ಕನ್ನಡಿಗರನ್ನು ಹೀಯಾಳಿಸಿದ ಮೇಯರ್ ಮಂದಾ ಬಾಳೆಕುಂದ್ರಿ ಅವರನ್ನು ಮೇಯರ್ ಗಿರಿಯಿಂದ ಕೆಳಗೆ ಇಳಿಸಬೇಕು ಮತ್ತು ಅವರನ್ನು ಕೂಡಲೆ ಬಂಧಿಸಬೇಕು ಎಂಬ ಕೂಗನ್ನು ಕನ್ನಡಪರ ಹೋರಾಟಗಾರರು ಎಬ್ಬಿಸಿದ್ದಾರೆ.












Click it and Unblock the Notifications