ಮಂಗಳೂರಿನಲ್ಲಿ ಅಪಾರ್ಟ್ ಮೆಂಟ್ ವಂಚಕನ ಸೆರೆ
ಮಂಗಳೂರು,
ನ.3 : ಒಂದಕ್ಕೊಂದು ಉಚಿತ ಎನ್ನುವುದು ಈಗ ಎಲ್ಲೆಡೆ ಸಾಮಾನ್ಯವಾಗಿ ಕೇಳಿಬರುವ ಮಾರಾಟದ ಆಮಿಷ. ಒಂದು ಖರೀದಿಸಿದರೆ ಮತ್ತೊಂದು ವಸ್ತು ಉಚಿತ ಅಂದರೆ ನಂಬದಿರಲು ಸಾಧ್ಯವಿಲ್ಲ ನಿಜ. ಆದರೆ ಇಲ್ಲೊಬ್ಬ ಮಹಾವಂಚಕ ಎರಡು ಫ್ಲ್ಯಾಟ್ ಖರೀದಿಸಿದರೆ ಮತ್ತೊಂದು ಫ್ಲ್ಯಾಟ್ ಉಚಿತ ಎನ್ನುವ ಪ್ರಚಾರ ಮಾಡಿ ಜೈಲು ಸೇರಿದ್ದಾನೆ. id="toptextpromo">ಇಲ್ಲಿಗೆ
ಸಮೀಪದ ಬಜಪೆ ನಿವಾಸಿ ಮಹಮ್ಮದ್ ಅನ್ಸಾರ್ ಎನ್ನುವವನೇ ಈಗ ಪೊಲೀಸರ ಬಲೆಗೆ ಬಿದ್ದಿರುವ ವಂಚಕ. ಈತ ಮೊಬೈಲ್ ಮೂಲಕ ಎರಡು ಖರೀದಿಸಿದರೆ ಮತ್ತೊಂದು ಉಚಿತ ಎನ್ನುವ ಎಸ್ಎಂಎಸ್ ಸಂದೇಶ ಕಳುಹಿಸುತ್ತಿದ್ದ. ಈತನ ಸಂದೇಶ ಓದಿದವರು ಫ್ಲ್ಯಾಟ್ ವೀಕ್ಷಣೆಗೆ ಹೋಗುತ್ತಿದ್ದರು. ನಿರ್ಮಾಣ ಹಂತದಲ್ಲಿರುವ ಯಾರದ್ದೋ ಪ್ಲ್ಯಾಟ್ ತೋರಿಸಿ ಯಾಮಾರಿಸುತ್ತಿದ್ದ. id='are-slot-1' class='oiad oi-axt oiadv'> id='top-searched-articles'>ಈತನ
ಪ್ರಚಾರದ ಸುಳಿವು ಪಡೆದ ಬಿಲ್ಡರ್ ಸಂಸ್ಥೆಯೊಂದರ ಅಧಿಕಾರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆಗಿಳಿದು ವಂಚಕನನ್ನು ಬಂಧಿಸಿದ್ದಾರೆ. ಒಂದು ಉಚಿತ ಫ್ಲ್ಯಾಟ್ ಸಿಗುತ್ತದಲ್ಲ ಎಂದು ಕನಸಿನ ಸೌಧ ಕಟ್ಟಿಕೊಳ್ಳುತ್ತಿದ್ದ ನಾಗರಿಕರು ದಿಗ್ಭ್ರಾಂತರಾಗಿದ್ದಾರೆ. ಹಾಗೆಯೆ, ದುಡ್ಡೆಲ್ಲ ವಂಚಕನ ಕೈಪಾಲಾಗಲಿಲ್ಲ ಎಂದು ನಿರಾಳರೂ ಆಗಿದ್ದಾರೆ.











Click it and Unblock the Notifications