ಫೋರ್ಬ್ಸ್ ಪಟ್ಟಿಯಲ್ಲಿ ಕಾಫಿ ಡೇ ಓನರ್ ಸಿದ್ಧಾರ್ಥ

ಸಿದ್ದಾರ್ಥ ಅವರು ಫೋರ್ಬ್ಸ್ ಪಟ್ಟಿಯಲ್ಲಿ 84ನೇ ಸ್ಥಾನ ಪಡೆದಿದ್ದು ಅವರ ಆಸ್ತಿಯ ಒಟ್ಟು ಮೌಲ್ಯ 2950 ಕೋಟಿ ರೂಪಾಯಿ. ನಿರೀಕ್ಷೆಯಂತೆ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಮಾಲಿಕ ಮುಖೇಶ್ ಅಂಬಾನಿ ದೇಶದ ನಂ.1 ಶ್ರೀಮಂತರಾಗಿ ಅಗ್ರಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಶ್ರೀಮಂತರ ಸಂಖ್ಯೆ ಇಳಿಮುಖ: ಈ ಬಾರಿ ಭಾರತೀಯ ಉದ್ಯಮಿಗಳ ಆಸ್ತಿ ಮೌಲ್ಯದಲ್ಲಿ ಭಾರೀ ಕುಸಿತ ಕಂಡುಬಂದಿದೆ. ಹಣದುಬ್ಬರ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದರಿಂದ 100 ಶ್ರೀಮಂತ ಭಾರತೀಯರ ಒಟ್ಟಾರೆ ಆಸ್ತಿ ಮೌಲ್ಯದಲ್ಲಿ ಶೇ.20ರಷ್ಟು ಇಳಿಕೆ ಕಂಡುಬಂದಿದೆ. ಅನಿಲ್ ಅಂಬಾನಿ ಮಾತ್ರ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿದ್ದಾರೆ.
ಕಳೆದ ವರ್ಷ 100 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ವಿನೋದ್ ಗೋಯೆಂಕಾ ಮತ್ತು ಶಾಹಿದ್ ಬಲ್ವಾ ಈ ಬಾರಿ ಪಟ್ಟಿಯಲ್ಲಿಲ್ಲ. 2ಜಿ ಹಗರಣದಲ್ಲಿ ಇಬ್ಬರೂ ಜೈಲು ಪಾಲಾಗಿದ್ದಾರೆ. ಇವರ ಕಂಪನಿಗಳ ಷೇರು ಮೌಲ್ಯ ಭಾರೀ ಕುಸಿತ ಕಂಡಿದೆ.
ಪ್ರಮುಖ ಶ್ರೀಮಂತರ ಪಟ್ಟಿ:
1. ಮುಖೇಶ್ ಅಂಬಾನಿ- 1.13 ಲಕ್ಷ ಕೋಟಿ ರೂ.
2. ಲಕ್ಷ್ಮೀ ನಿವಾಸ್ ಮಿತ್ತಲ್- 96,000 ಕೋಟಿ ರೂ.
3. ಅಜೀಂ ಪ್ರೇಮ್‌ಜಿ- 65,000 ಕೋಟಿ ರೂ.
4. ಶಶಿ ಮತ್ತು ರವಿ ರೂಯಿಯಾ- 51,000 ಕೋಟಿ ರೂ.
5. ಸಾವಿತ್ರಿ ಜಿಂದಾಲ್- 47,500 ಕೋಟಿ ರೂ.
6. ಸುನಿಲ್ ಮಿತ್ತಲ್- 44000 ಕೋಟಿ ರೂ.
7. ಗೌತಮ್ ಅದಾನಿ- 41,000 ಕೋಟಿ ರೂ.
8. ಕುಮಾರಮಂಗಳಂ ಬಿರ್ಲಾ- 38,500 ಕೋಟಿ ರೂ.
9. ಪಲ್ಲೋನ್‌ಜಿ ಮಿಸಿ- 38,000 ಕೋಟಿ ರೂ.
10. ಆದಿ ಗೋದ್ರೇಜ್- 34,000 ಕೋಟಿ ರೂ.
13. ಅನಿಲ್ ಅಂಬಾನಿ- 29,500 ಕೋಟಿ ರೂ.
84. ವಿ.ಜಿ. ಸಿದ್ದಾರ್ಥ- 2950 ಕೋಟಿ ರೂ.












Click it and Unblock the Notifications