ಪ್ರಯಾಣಿಕರಿಗೆ ಸೂಚನೆ ಭಾರತಕ್ಕೆ ಕಾಲಿಡಬೇಡಿ!

ಆಸ್ಟ್ರೇಲಿಯಾ ಸೇರಿದಂತೆ ಇತರೆ ನಾಲ್ಕು ದೇಶಗಳು ಭಾರತ ವಿರುದ್ಧ ಹೊರಡಿಸಿರುವ ಈ ಎಚ್ಚರಿಕೆ ಸುತ್ತೋಲೆಯಲ್ಲಿ ಬಳಕೆಯಾಗಿರುಅ ಭಾಷೆ ಸರಿಯಿಲ್ಲ. ಕೂಡಲೇ ಎಚ್ಚರಿಕೆಯನ್ನು ಹಿಂದಕ್ಕೆ ಪಡೆಯುವಂತೆ ಕೋರಲಾಗಿದೆ ಎಂದು ಎಸ್ ಎಂ ಕೃಷ್ಣ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾದ ಸಚಿವ ಕೆವಿನ್ ರುಡ್, ಇದು ಸಾಮಾನ್ಯವಾಗಿ ನೀಡುವ ಸಲಹೆಯಾಗಿದೆ. ಭಾರತದಲ್ಲಿ ಪ್ರವಾಸಿಗರಿಗೆ ಭೀತಿ ಇದೆ ಎಂದು ಯಾವುದೇ ವಿಶೇಷ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಕೂಡಲೇ ಪರಿಶೀಲಿಸುತ್ತೇವೆ ಎಂದಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಶೇ.100ರಷ್ಟು ಪ್ರವಾಸಿ ಮಂದಿರಗಳು ಭರ್ತಿಯಾಗಿದೆ. ದೇಶದ ಇತರೆಡೆ ಕೂಡಾ ಸೂಕ್ತ ಭದ್ರತೆ ಇದೆ. ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲೆಂಡ್, ಅಮೆರಿಕ ಹಾಗೂ ಇಂಗ್ಲೆಂಡ್ ತನ್ನ ದೇಶದ ಪ್ರವಾಸಿಗರಿಗೆ ಎಚ್ಚರಿಕೆ ನೀಡಿರುವ ಬಗ್ಗೆ ಕೇಂದ್ರ ಸರ್ಕಾರ ಚಿಂತೆ ವ್ಯಕ್ತಪಡಿಸಿದೆ.
ಈ ರೀತಿ ಎಚ್ಚರಿಕೆಯಿಂದ ಪ್ರವಾಸೋದ್ಯಮಕ್ಕೆ ಶೇ.10 ರಿಂದ 20 ರಷ್ಟು ನಷ್ಟವಾಗುತ್ತದೆ. ಅಲ್ಲದೆ ಭಾರತದ ಬಗ್ಗೆ ಇರುವ ಇಮೇಜ್ ಕೂಡಾ ಹಾಳಾಗುತ್ತದೆ. ಆಸ್ಟ್ರೇಲಿಯಾ ನಂತರ ಉಳಿದ ದೇಶಗಳಿಗೂ ಎಚ್ಚರಿಕೆಯನ್ನು ಹಿಂದಕ್ಕೆ ಪಡೆಯುವಂತೆ ಕೋರಲಾಗುವುದು ಎಂದು ಕೃಷ್ಣ ಹೇಳಿದ್ದಾರೆ.












Click it and Unblock the Notifications