ದೇವೇಗೌಡರ ಹಿರಿಪುತ್ರ ಬಾ.ಕೃ ಗೌಡರಿಗೆ ರಿಲೀಫ್

ಲೋಕಾಯುಕ್ತ ವಿಶೇಷ ನ್ಯಾಯಲಯದಲ್ಲಿ ಬುಧವಾರ(ಅ.26) ನಡೆದ ವಿಚಾರಣೆ ನಡೆಯಿತು. ತನಿಖೆ ಬಗ್ಗೆ ಸಂಪೂರ್ಣ ವಿವರಣೆ(action plan) ನೀಡುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಧೀಶ ಎನ್ ಕೆ ಸುಧೀಂದ್ರ ರಾವ್ ಅವರು ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದ್ದಾರೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ನ.26ಕ್ಕೆ ಮುಂದೂಡಲಾಗಿದೆ. ಸಂಪೂರ್ಣ ವರದಿ ಸಲ್ಲಿಸಲು ಕನಿಷ್ಠ ಎಂದರೂ ಮೂರು ತಿಂಗಳ ಅವಕಾಶ ಬೇಕಾಗುತ್ತದೆ ಎಂದು ಲೋಕಾಯುಕ್ತ ಪೊಲೀಸರು ಮನವಿ ಮಾಡಿದ್ದಾರೆ.
ಕೇಸ್ ಹಿಸ್ಟರಿ: ಬಾಲಕೃಷ್ಣ ಎಂಬ ನಿವೃತ್ತ ಸರ್ಕಾರಿ ಅಧಿಕಾರಿ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಬಾಲಕೃಷ್ಣ ಗೌಡರ ವಿರುದ್ಧ ದೂರು ದಾಖಲಿಸಿದ್ದರು.
ಕೋರ್ಟ್ ಆದೇಶದ ಮೇರೆಗೆ ಲೋಕಾಯುಕ್ತ ಸಹಾಯಕ ಮಹಾ ನಿರ್ದೇಶಕ ಜೀವನ್‌ಕುಮಾರ್ ಗಾಂವ್‌ಕರ್ ಅವರು ಸೆ.30ರಂದು ಬಾಲಕೃಷ್ಣ ಗೌಡರ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು.












Click it and Unblock the Notifications