ಆರೋಪಿ ಗೃಹ ಸಚಿವ ಅಶೋಕ್ ಯಾಕ್ ರಾಜೀನಾಮೆ ನೀಡುತ್ತಿಲ್ಲ?

ಅಶೋಕಗೆ ಸಚಿವ ಸ್ಥಾನದಲ್ಲಿ ಮುಂದುವರಿಯಲು ಯಾವುದೇ ಅರ್ಹತೆ ಇಲ್ಲ. ಆರೋಪಿಯೇ ಗೃಹ ಮಂತ್ರಿಯಾಗಿರುವಾಗ ಯಾವ ಪೊಲೀಸ್ ಅಧಿಕಾರಿ ತನಿಖೆ ಮಾಡಲು ಮುಂದಾಗುತ್ತಾರೆ ಎಂಬ ಪರಿಸ್ಥಿತಿ ಇದೆ.
ಹೀಗಾಗಿ, ನ್ಯಾಯಾಲಯದ ಆದೇಶಕ್ಕೆ ತಲೆಬಾಗುತ್ತೇನೆ ಎಂದು ಹೇಳುವ ಸಚಿವ ಅಶೋಕ್, ತಾವಾಗಿಯೇ ಮುಂದೆ ಬಂದು ರಾಜೀನಾಮೆ ಸಲ್ಲಿಸಿದರೆ ಒಳಿತು ಎಂದು ನಾಗರಿಕ ಸಮಿತಿ ಸದಸ್ಯ ಎನ್. ನರಸಿಂಹಮೂರ್ತಿ ಆಗ್ರಹಿಸಿದ್ದಾರೆ.
ನಗರದ ಎಂ.ಜಿ. ರಸ್ತೆಯ ಗಾಂಧಿ ಪ್ರತಿಮೆ ಮುಂಭಾಗ ಸೋಮವಾರ ಧರಣಿ ನಡೆಸಿದ ಮಾನವ ಹಕ್ಕುಗಳ ಹೋರಾಟಗಾರರು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ರಾಜ್ಯಾಪಾಲರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ನಾಗರಿಕ ಸಮಿತಿ ಸದಸ್ಯರು, ವಕೀಲರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.












Click it and Unblock the Notifications