ನಾನು ಏಕಲವ್ಯ ಎಂದ ಶ್ರೀರಾಮುಲು; ರೆಡ್ಡಿಗಾರು ದ್ರೋಣಾಚಾರ್ಯುಡು!
ಧಾರವಾಡ,
ಅ.24: ಇದು ನಿಜಕ್ಕೂ ಶುದ್ಧ ಕುಹಕವೇ ಸರಿ. 'ನಾನು ಏಕಲವ್ಯನಂತೆ ಓದು, ಬರಹ, ಗುರು ಇಲ್ಲದೇ ನಿಷ್ಣಾತ ಬಿಲ್ಗಾರನಾಗಿದ್ದೇನೆ. ಹೀಗಾಗಿ ಹೆಬ್ಬೆರಳು ನನ್ನ ಕೈಯಲ್ಲಿ ಹಾಗೂ ಗುರಿ ಕಣ್ಣುಗಳಲ್ಲೇ ಇರಬೇಕೆಂದರೆ ನಿಮ್ಮೆಲ್ಲರ ಆಶೀರ್ವಾದ ಸದಾ ನನ್ನ ಮೇಲಿರುವಂತೆ ನೋಡಿಕೊಳ್ಳಿ' ಎಂದು ಧಾರವಾಡದ ಮಂದಿಗೆ ರಜಾ ದಿನವಾದ ಭಾನುವಾರ ತಿಳಿಸಿದ್ದಾರೆ. id="toptextpromo">ಇದ್ದ
ಶಾಸಕ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿ, ಸದ್ಯದ ರಾಜ್ಯ ರಾಜಕೀಯದಲ್ಲಿ ತಾವು ಒಬ್ಬಂಟಿ ಎಂಬುದನ್ನು ಮೇಲಿನ ಮಾತುಗಳ ಮೂಲಕ ಸಮಾಜದ ಮುಂದೆ ತೆರೆದಿಡುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಇದೇ ವೇಳೆ, ಸದ್ಯಕ್ಕೆ ಚಂಚಲಗೂಡ ಜೈಲಿನಲ್ಲಿ ತಮ್ಮ ದ್ರೋಣಾಚಾರ್ಯುಡು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಎಂದು ರಾಮುಲು ಹೇಳಿರುವುದು ಕುಹಕವಷ್ಟೆ. ಇದಕ್ಕೆ ಪುಷ್ಟಿ ನೀಡುವಂತೆ 'ಪ್ರತಿಷ್ಠೆ ಮೂರ್ಕಾಲ, ನಿಷ್ಠೆ ನೂರ್ಕಾಲ' ಎಂಬ ಮಹರ್ಷಿ ವಾಲ್ಮೀಕಿ ತತ್ವವನ್ನೂ ವೇದಾಂತಿಯಂತೆ ಉದ್ಧರಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮುಂದುವರಿದ
ರಾಮುಲು ತಮ್ಮ ಜೀವನಾನುಭವವನ್ನು ಹೀಗೆ ಹಂಚಿಕೊಂಡರು: ಶಿಕ್ಷಣದಿಂದ ಪರಿವರ್ತನೆ ಸಾಧ್ಯ ಎಂದು ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ್ದರು. ಆದ್ದರಿಂದ ಸಮಾಜದ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ. ಅವರನ್ನು ಡಾಕ್ಟರ್, ಇಂಜಿನಿಯರ್, ದೇಶ ಕಾಯುವ ಸೈನಿಕ ಏನಾದರೂ ಮಾಡಿ. ಆದರೆ ... ಅಪ್ಪಿತಪ್ಪಿಯೂ ರಾಜಕೀಯ ಕ್ಷೇತ್ರಕ್ಕೆ ಮಾತ್ರ ತರಬೇಡಿ ಎಂದು ಶ್ರೀರಾಮುಲು ಮನವಿ ಮಾಡಿದರು! ಆಗ್ಲೇ ನಮ್ಮ ನಾಯಕರಿಗೆ ರಾಜಕೀಯ ಸಾಕಾಯಿತೇ!? ರಾಮ ರಾಮ...











Click it and Unblock the Notifications