ಈಶ್ವರಪ್ಪ ಬಿಟ್ಟ 'ಭೂ' ಚಕ್ರ ಛಿದ್ರಗೊಳಿಸಿದ ಕೃಷ್ಣ

ಸರಿಯಾದ ದಾಖಲೆ, ಸಾಕ್ಷಿ ಇದ್ದರೆ ನ್ಯಾಯಯುತವಾಗಿ ಕೋರ್ಟ್ ನಲ್ಲಿ ಕೇಸ್ ಹಾಕಿ ವಾದಿಸಿ ಅದರ ಬದಲು ಮನಬಂದಂತೆ ಹರಟುತ್ತಾ ಬೀದಿ ಜಗಳ ಮಾಡಬೇಡಿ. ಕರ್ನಾಟಕದಲ್ಲಿ ಈಗ ಕೆಲವರಿಗೆ ಸುಮ್ಮನೆ ಚಪಲಕ್ಕೆ ಕೇಸ್ ಹಾಕುವ ಹುಚ್ಚು ಚಟ ಹತ್ತಿಕೊಂಡಿದೆ. ಇದರಿಂದ ಸಮಯ ವ್ಯರ್ಥ ಎಂದು ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಹೇಳಿದ್ದಾರೆ.
'ನನ್ನ ಅವಧಿಯಲ್ಲಿ ನಡೆದಿರುವ ಡಿನೋಟಿಫಿಕೇಷನ್ ದಾಖಲೆಗಳು ವಿಧಾನಸೌಧದಲ್ಲಿ ಸಿಗುತ್ತದೆ. ಮಾಹಿತಿ ಹಕ್ಕು ಕಾಯ್ದೆ ಮೂಲಕ ಪಡೆದು ಪರಿಶೀಲಿಸಿ ನಂತರ ಆರೋಪ ಮಾಡಲಿ' ಎಂದು ಕೃಷ್ಣ ಹೇಳಿದರು.
100 ಎಕರೆ ಡಿನೋಟಿಫೈ ಮಾಡಿದರು ಇಂದು ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಎಸ್ಸೆಂ ಕೃಷ್ಣ ಅವರ ಅಧಿಕಾರಾವಧಿಯಲ್ಲಿ ಸುಮಾರು 800 ಎಕರೆ ಭೂಮಿ ಅಕ್ರಮವಾಗಿ ಡಿನೋಟಿಫೈ ಮಾಡಲಾಗಿದೆ ಆದರೂ ಅವರು ಆರಾಮವಾಗಿ ಓಡಾಡಿಕೊಂಡಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದ್ದರು.












Click it and Unblock the Notifications