ಮೋದಿಗೆ ತೀವ್ರ ಹಿನ್ನಡೆ: ಮೋದಿಯ ಪಾತ್ರ ತನಿಖೆಯಾಗಲಿ ಎಂದ ಆಮಿಕಸ್ ಕ್ಯೂರಿ

2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ನಡೆದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ ಸಾಕ್ಷಿದಾರರ ವಿಚಾರಣೆಯಿಂದ ಸುಪ್ರೀಂಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡ (ಸಿಟ್) ಕಲೆ ಹಾಕುವ ವರದಿಗಳನ್ನು ಸ್ವತಂತ್ರವಾಗಿ ವೌಲ್ಯಮಾಪನ ಮಾಡಲು ನ್ಯಾಯಾಲಯವು ರಾಮಚಂದ್ರನ್‌ರನ್ನು ನೇಮಿಸಿತ್ತು.
ಈ ಮಧ್ಯೆ, ಐಪಿಎಸ್ ಅಧಿಕಾರಿ ಸಂಜೀವ್ ಭಟ್ ನೀಡಿರುವ ಸಾಕ್ಷವು ವಿವಾದಾತ್ಮಕ ಹಾಗೂ ಅವಿಶ್ವಸನೀಯವಾಗಿರುವುದರಿಂದ ಮೋದಿ ವಿರುದ್ಧ ಪ್ರಕರಣವನ್ನು ಮುಚ್ಚಿಹಾಕುವಂತೆ ಸಿಟ್ ಶಿಫಾರಸು ಮಾಡಿತ್ತು. ಆದರೆ ಸಿಟ್ ಅಭಿಪ್ರಾಯವನ್ನು ರಾಮಚಂದ್ರನ್ ವರದಿಯು ತಳ್ಳಿಹಾಕಿದೆ.
'ಭಟ್ ನೀಡಿರುವ ಸಾಕ್ಷದ ವೌಲ್ಯಮಾಪನ ನಡೆಸಬೇಕಾದ ಅಗತ್ಯವಿದೆ. ಭಟ್ ಹೇಳಿಕೆಯಲ್ಲಿ ನಿಜಾಂಶವಿದೆ. ಸಂಜೀವ್ ಭಟ್ ಹಾಗೂ ಸಭೆಯಲ್ಲಿ ಹಾಜರಿದ್ದ (2002ರ ಫೆಬ್ರವರಿ 27) ಉನ್ನತ ಪೊಲೀಸ್ ಅಧಿಕಾರಿಗಳನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ಬಳಿಕವೇ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು' ಎಂದು ಅದು ಸಲಹೆ ನೀಡಿದೆ.
ಸಂಜೀವ್ ಭಟ್ ಹಾಗೂ ಸಭೆಯಲ್ಲಿ ಹಾಜರಿದ್ದ (2002ರ ಫೆಬ್ರವರಿ 27) ಉನ್ನತ ಪೊಲೀಸ್ ಅಧಿಕಾರಿಗಳನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ಬಳಿಕವೇ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕೆಂದು ಅದು ಸಲಹೆ ನೀಡಿದೆ.
ವಿಚಾರಣಾ ನ್ಯಾಯಾಲಯವು ರಾಮಚಂದ್ರನ್ ವರದಿಯನ್ನು ಅಂಗೀಕರಿಸಿದ್ದೇ ಆದಲ್ಲಿ ಸೆಕ್ಷನ್ 153ಎ, 153ಬಿ, 505 ಹಾಗೂ 166 ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳನ್ವಯ ನರೇಂದ್ರ ಮೋದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ.
ಒಂದು ವೇಳೆ ರಾಮಚಂದ್ರನ್ ಅಭಿಪ್ರಾಯವನ್ನು ಸಿಟ್ ತಿರಸ್ಕರಿಸಿದಲ್ಲಿ, ಜಾಫ್ರಿ ಹಾಗೂ ಅವರ ಸಹ ದೂರುದಾರೆ ತೀಸ್ತಾ ಸೆಟಲ್ವಾಡ್ ಅದನ್ನು ವಿಚಾರಣಾ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ. ಅಷ್ಟೇ ಅಲ್ಲದೆ ರಾಮಚಂದ್ರನ್‌ರ ವರದಿಯನ್ನು ಆಧರಿಸಿ, ವಿಚಾರಣಾ ನ್ಯಾಯಾಲಯವು ತನ್ನದೇ ಆದ ಒಂದು ಅಭಿಪ್ರಾಯಕ್ಕೆ ಬರಲೂ ಸಾಧ್ಯವಿದೆ.












Click it and Unblock the Notifications