ಹೈಕೋರ್ಟಿಗೆ ಮುಖಭಂಗ, ಎಚ್ಡಿಕೆಗೆ ಮತ್ತೆ ಬುಲಾವ್

ಲೋಕಾಯುಕ್ತ ವಿಚಾರಣೆಗೆ ತಡೆ ನೀಡಿ, ಇಡೀ ಪ್ರಕರಣವನ್ನು ರದ್ದುಗೊಳಿಸಿದ್ದ ಹೈಕೋರ್ಟ್ ಗೆ ಇದರಿಂದ ಭಾರಿ ಮುಖಭಂಗವಾಗಿದೆ. ಹೈಕೋರ್ಟ್ ಆದೇಶಕ್ಕೂ ಲೋಕಾಯುಕ್ತ ಕೋರ್ಟ್ ವಿಚಾರಣೆಗೂ ಸಂಬಂಧವಿಲ್ಲ. ಪ್ರಕರಣದ ವಿಚಾರಣೆ ಮುಂದುವರೆಯಲಿದೆ ಎಂದು ನ್ಯಾಯಧೀಶ ಸುಧೀಂದ್ರರಾವ್ ಹೇಳಿದ್ದಾರೆ.
ಎಚ್ ಡಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರು ಮುಂದಿನ ವಿಚಾರಣೆಗಾಗಿ ನ.8ರಂದು ಸಿಟಿ ಸಿವಿಲ್ ನ್ಯಾಯಾಲಯ ಸಂಕೀರ್ಣದಲ್ಲಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಲೇಬೇಕಿದೆ.
ಫಿರ್ಯಾದುದಾರ ವಿನೋದ್ ಕುಮಾರ್ ಅವರು ಲೋಕಾಯುಕ್ತ ಕೋರ್ಟ್ ಆದೇಶದಿಂದ ಸಂತೋಷಗೊಂಡಿದ್ದು, ನ್ಯಾಯಯುತವಾದ ತೀರ್ಪು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.
ಹೈಕೋರ್ಟ್ ನಿಂದ ಜಾಮೀನು ಪಡೆದು ನಂತರ ಪ್ರಕರಣ ರದ್ದುಗೊಂಡ ಮೇಲೆ ಎಚ್ಡಿಕೆ ದಂಪತಿ ಡಬ್ಬಲ್ ಧಮಾಕ ಅನುಭವಿಸಿದ್ದರು. ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆಸಿದ್ದ ಎಚ್ಡಿಕೆ ದಂಪತಿಗೆ ಈಗ ಮತ್ತೆ ಲೋಕಾಯುಕ್ತ ಕೋರ್ಟ್ ಕಿರಿಕಿರಿ ಆರಂಭವಾಗಿದೆ.
ಲೋಕಾಯುಕ್ತ ಕೋರ್ಟ್ ಆದೇಶದ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಅವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications