ನಿರಾಣಿಗೆ ದೀಪಾವಳಿ ಠುಸ್ಸ್: ತನಿಖೆಗೆ ಕೋರ್ಟ್ ಆದೇಶ
ಬೆಂಗಳೂರು,
ಅ.24: ಕೈಗರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಉದ್ಯಮಿ ಅಲಂ ಪಾಷಾ ಸಲ್ಲಿಸಿರುವ ಖಾಸಗಿ ದೂರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಎತ್ತಿಹಿಡಿದಿದ್ದು, ನವೆಂಬರ್ 16ರೊಳಗಾಗಿ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಲೋಕಾಯುಕ್ತ ಎಸ್ ಪಿ ಗೆ ಆದೇಶಿಲಾಗಿದೆ. id="toptextpromo">ಇದರಿಂದ
ನಿರಾಣಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅವರ ಮೇಲೆ ರಾಜೀನಾಮೆಗೆ ಒತ್ತಡ ಹೇರಲಾಗಿದೆ. ಅನೇಕಲ್ ಬಳಿ ಜಮೀನೊಂದರ ಡಿನೋಟಿಫಿಕೇಶನ್ ಪ್ರಕರಣದ ಸಂಬಂಧ ಸರಿಯಾಗಿ ದೂರು ಸಲ್ಲಿಸಿಲ್ಲವೆಂದು ನ್ಯಾಯಾಧೀಶ ಎನ್ ಕೆ ಸುಧೀಂದ್ರರಾವ್ ಅವರು ದೂರುದಾರ ಅಲಂ ಪಾಷಾ ವಿರುದ್ಧ ಇಂದೂ ಸಹ ಕಿಡಿಕಾರಿದರಾದರೂ ಪಾಷಾ ಅವರದೇ ಅಂತಿಮ ನಗೆಯಾಯಿತು. id='are-slot-1' class='oiad oi-axt oiadv'> id='top-searched-articles'>ಪಾಷಾ
ದೂರಿನಲ್ಲಿ ಮೇಲ್ನೋಟಕ್ಕೆ ಹುರುಳಿದೆ ಎಂಬುದನ್ನು ಮನಗಂಡ ನ್ಯಾ. ಸುಧೀಂದ್ರ ಅವರು ನಿರಾಣಿ ವಿರುದ್ಧ ಸಿಆರ್ ಪಿಸಿ 156/3 ಅನುಸಾರ ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳುವಂತೆ ಆದೇಶಿಸಿದರು.











Click it and Unblock the Notifications