ಜಾಮೀನು ಬೇಡ ಜೈಲಲ್ಲಿ ದೀಪ ಹಚ್ಚುವೆ ಎಂದ ಯಡ್ಡಿ

ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದು, ಪೂರ್ಣ ಪ್ರಮಾಣದ ಜಾಮೀನು ಅರ್ಜಿಯನ್ನು ಯಡಿಯೂರಪ್ಪ ಪರ ವಕೀಲ ಜಯಕುಮಾರ್ ಪಾಟೀಲ್ ಸಲ್ಲಿಸಿದರು.
ಸಿರಾಜಿನ್ ಬಾಷಾ ಸಲ್ಲಿಸಿರುವ 2, 3 ನೇ ದೂರಿಗೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದ ಜಾಮೀನು ನೀಡದಿರುವಂತೆ ಸಿರಾಜಿನ್ ಬಾಷಾ ಪರ ವಕೀಲ ಸಿ.ಎಚ್ ಹನುಮಂತರಾಯ ಅವರು ವಾದಿಸಿದರು. ಪ್ರತಿವಾದ ಗಳ ವಾದ ಮುಗಿಯದ ಕಾರಣ ಮುಂದಿನ ವಿಚಾರಣೆಯನ್ನು ಅ.28ಕ್ಕೆ ಮುಂದೂಡಬೇಕಾಯಿತು.
ದೀಪಾವಳಿ ಹಬ್ಬದ ಕಾರಣ ನ್ಯಾಯಾಲಯಕ್ಕೆ ಮೂರು ದಿನಗಳ ಕಾಲ ರಜೆ ಇರುತ್ತದೆ. ಹೀಗಾಗಿ ವಿಚಾರಣೆಯನ್ನು ಅ.28ಕ್ಕೆ ಮುಂದೂಡಲಾಗಿದೆ. ಯಡಿಯೂರಪ್ಪ ಅವರ ಜೊತೆಗೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರ ಜಾಮೀನು ಅರ್ಜಿ ಪ್ರಕರಣವನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಮುಂದೂಡಲಾಗಿದೆ.
ಯಡಿಯೂರಪ್ಪ ನ್ಯಾಯಾಂಗ ಬಂಧನದ ಅವಧಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ನ.3ರ ವರೆಗೆ ವಿಸ್ತರಿಸಿ ಶನಿವಾರ(ಅ.22) ಆದೇಶ ನೀಡಿದೆ.
ಅಂತೂ ಈ ಬಾರಿ ಬೆಳಕಿನ ಹಬ್ಬ ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ, ಕಟ್ಟಾ ಜಗದೀಶ್, ಕಟ್ಟಾ ನಾಯ್ಡು ಪಾಲಿಗೆ ಕರಾಳವಾಗಿ 'ಮರೆಯದ ದೀಪಾವಳಿ'ಯಾಗಲಿದೆ.












Click it and Unblock the Notifications