ಇಟಗಾ ಗ್ರಾಮದಲ್ಲಿ ಬಿಜೆಪಿ ನಾಯಕನ ಬರ್ಬರ ಹತ್ಯೆ

ಸುರಪುರ ತಾಲೂಕು ಹೇಮನೂರಿನವರಾದ ಅವರು ಶನಿವಾರ ಸಂಜೆ ಶಹಾಪುರದಲ್ಲಿ ಸಂತೆ ಮುಗಿಸಿ ತಾಲೂಕಿನ ಇಟಗಾದಲ್ಲಿ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಈ ವೇಳೆಯಲ್ಲಿ ಹಂತಕರು ಹೊಂಚು ಹಾಕಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಮಾಡಿ ಪರಾರಿಯಾಗಿದ್ದಾರೆ.
ಬಾಲದಂಡಪ್ಪ ಅವರು ಸಚಿವ ರಾಜೂಗೌಡ ಆಪ್ತವಲಯದಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದರು. 2006-07ನೇ ಸಾಲಿನಲ್ಲಿ ತಾಪಂ. ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಖಾನಾಪುರ ಕ್ಷೇತ್ರದಲ್ಲಿ ಎಬಿಪಿಜೆಡಿಯಿಂದ ಆಯ್ಕೆಯಾಗಿದ್ದರು.
ಹೇಮನೂರಿನ ಸಂಜೀವಪ್ಪ ಕೊಲೆ ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದ ಬಾಲದಂಡಪ್ಪ ಜಾಮೀನು ಸಿಗದೆ ತಲೆಮರಸಿಕೊಂಡಿದ್ದ. ಅವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಇನ್ನೊಂದು ಬಣದವರು ಕಾಯುತ್ತಿದ್ದರು. ಸಂಜೀವಪ್ಪ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರೂ ಬಾಲದಂಡಪ್ಪನಿಗೆ ಜಾಮೀನು ಸಿಕ್ಕಿರಲಿಲ್ಲ. ಇಷ್ಟರಲ್ಲೇ ಅವರು ನ್ಯಾಯಾಲಯಕ್ಕೆ ಶರಣಾಗಲು ಯೋಚನೆ ನಡೆಸಿದ್ದರು.
ಘಟನಾ ಸ್ಥಳಕ್ಕೆ ಡಿಎಸ್ಪಿ ಬ್ಯಾಗವಾಡಮಠ, ಸಿಪಿಐ ಜಯಪ್ರಕಾಶ ನ್ಯಾಮಗೌಡ, ಭೀಮರಾಯನಗುಡಿ ಸಬ್ ಇನ್ಸ್‌ಪೆಕ್ಟರ್ ಎನ್.ಕೆ.ದೌಲತ್ ಬೇಟಿ ನೀಡಿ ಪರಿಶೀಲಿಸಿದರು. ಮರಣೋತ್ತರ ಪರೀಕ್ಷೆ ನಡೆಸಿ ಮಾರ್ತಾಂಡಪ್ಪನ ಮೃತ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಭೀಮರಾಯನಗುಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.












Click it and Unblock the Notifications