ನ.15 ನಂತರ ಯಡಿಯೂರಪ್ಪ ಗ್ರಹಗತಿ ಬದಲು

ಯಡಿಯೂರಪ್ಪ ಅವರಿಗೆ ಅಕ್ಟೋಬರ್ ತಿಂಗಳಲ್ಲಿ ಕಂಟಕ ಇದೆ ಎಂದು ಆಪ್ತ ಜ್ಯೋತಿಷಿಗಳು ಎಚ್ಚರಿಸಿದ್ದರು. ಸೌಮ್ಯ ಗ್ರಹಗಳ ಮೇಲೆ ನೀಚ ಗ್ರಹಗಳ ವಕ್ರದೃಷ್ಟಿ ಬೀರುತ್ತಿದೆ. ಈ ಸಮಯದಲ್ಲಿ ಮಾತಿಗಿಂತ ಮೌನಕ್ಕೆ ಹೆಚ್ಚು ಬೆಲೆ ಸಿಗುತ್ತದೆ.
ಜೈಲುಹಕ್ಕಿ ಬಗ್ಗೆ ವಲಸೆ ಹಕ್ಕಿ: ಕಾರ್ತೀಕ ಮಾಸದ ಎರಡನೇ ಸೋಮವಾರ ನಂತರ ಎಳ್ಳು ದೀಪ ಹಚ್ಚಿದರೆ ನಿಮ್ಮ ಸಂಕಷ್ಟಗಳು ದೂರಾಗುತ್ತದೆ ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ. ದೀಪಾವಳಿ ಸಮಯದ ಅಮಾವಾಸ್ಯೆ ತನಕ ಕಷ್ಟ ತಪ್ಪಿದ್ದಲ್ಲ ಎಂದು ಹೇಳಲಾಗಿದೆ.
ಯಡಿಯೂರಪ್ಪ ಅವರು ತ್ವರಿತವಾಗಿ ಬೆಳೆದ ರೀತಿ ನೋಡಿ ಸಹಿಸದ ಕೆಲವರು ಮಾಡಿದ ಪಿತೂರಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅದಕ್ಕೆ ತಕ್ಕಬೆಲೆ ತೆರಬೇಕಾಗುತ್ತದೆ. ಧರ್ಮಸ್ಥಳ ಮಂಜುನಾಥಸ್ವಾಮಿ ಆಶೀರ್ವಾದ ಬೇಡಿದ್ದೇನೆ. ಯಡಿಯೂರಪ್ಪ ಅವರ ಕಷ್ಟಕಾಲ ದೂರಾಗಲಿ ಎಂದು ಪ್ರಾಥಿಸಿದೆ ಎಂದು ಸೋಮಣ್ಣ ಹೇಳಿದ್ದಾರೆ.












Click it and Unblock the Notifications