ಬಿಎಸ್ ವೈ ಅಶಕ್ತ ಎಂದ್ರೆ ಕೋರ್ಟ್ ನಂಬ್ತಾ ಇಲ್ಲ

ಆದರೆ, ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಅ.20ಕ್ಕೆ ಮುಂದೂಡಿದೆ. ಹೀಗಾಗಿ ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ಕೃಷ್ಣ ಜನ್ಮಸ್ಥಾನದ ದರ್ಶನ ಭಾಗ್ಯ ಲಭಿಸಿದೆ.
ಯಡಿಯೂರಪ್ಪ ಅವರು ಮತ್ತೆ ಜೈಲಿಗೆ ಹೋಗ್ತಾರಾ ಅಥವಾ ಆಸ್ಪತ್ರೆ ಯಾತ್ರೆ ಮುಂದುವರೆಸುತ್ತಾರಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಯಡಿಯುರಪ್ಪ ಮತ್ತೆ ಅನಾರೋಗ್ಯ ಪೀಡಿತರಾದರೂ ಪರಪ್ಪನ ಅಗ್ರಹಾರದ ಜೈಲಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬೇಕಾಗುತ್ತದೆ.
ಖಾಸಗಿ ದೂರಿಗೆ ಜಾಮೀನು ಅರ್ಜಿ ತಿರಸ್ಕರಿಸಿರುವುದು ಇದೇ ಮೊದಲು. ಅ.20 ರಂದು ಜಾಮೀನು ಸಿಗುವ ನಿರೀಕ್ಷೆಯಿದೆ. ಎಂದು ಯಡಿಯೂರಪ್ಪ ಪರ ವಕೀಲ ರವಿ.ಬಿ. ನಾಯ್ಕ್ ಅವರು ಹೇಳಿದ್ದಾರೆ.
ಆದರೆ, ಅನಾರೋಗ್ಯ ನೆಪವೊಡ್ಡಿ ಜಾಮೀನು ಪಡೆಯುವ ಯಡಿಯೂರಪ್ಪ ಅವರ ಆಸೆ ಈಡೆರುವುದು ಕಷ್ಟ ಎನಿಸಿದೆ. ನಾನು ಮಾಜಿ ಸಿಎಂ ಆಗಿರುವುದರಿಂದ ಯಾವುದೇ ಪ್ರಭಾವ ಬೀರಲು ಸಾಧ್ಯವಿಲ್ಲ. ಸಾಕ್ಷ್ಯ ಎಲ್ಲವೂ ಲೋಕಾಯುಕ್ತ ಕೋರ್ಟ್ ವಶದಲ್ಲೇ ಇದೆ ಹೀಗಾಗಿ ನನಗೆ ಜಾಮೀನು ನೀಡಿ ಎಂದು ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದಾರೆ.












Click it and Unblock the Notifications