ನ್ಯಾ. ಹೆಗ್ಡೆಗೆ ನಗಬೇಕೋ, ಅಳಬೇಕೋ ತಿಳಿಯದಾಗಿದೆ!
ಬೆಂಗಳೂರು,
ಅ.14: ಅಗಣಿತ ಭ್ರಷ್ಟಾಚಾರಿಗಳನ್ನು ರಕ್ಷಿಸುವ ಧಾವಂತದಲ್ಲಿ ಸರಕಾರವೇ ತಮ್ಮ ವರದಿಯ ಬಗ್ಗೆ ಸ್ಪಷ್ಟನೆ ಕೋರಿರುವುದನ್ನು ಕೇಳಿ ನ್ಯಾ. ಸಂತೋಷ್ ಹೆಗ್ಡೆ ಅವರಿಗೆ ನಗಬೇಕೋ, ಅಳಬೇಕೋ ತಿಳಿಯದಾಗಿದೆ. ಸರಕಾರದ ಈ ನಿರ್ಧಾರದ ಬಗ್ಗೆ ಅವರ ಮುಂದಿನ ನಡೆ ಕುತೂಹಲಕಾರಿಯಾಗಿ ಇದೆ. ಹಾಗೆಂದು ಸ್ವತಃ ಅವರೇ ಸರಕಾರಕ್ಕೆ ಸ್ಪಷ್ಟನೆ ಕೊಡಲು ಬಾಧ್ಯಸ್ಥರೇನೂ ಅಲ್ಲ. ಆದರೂ... id="toptextpromo">ಈಗಾಗಲೇ
ದೈತ್ಯರನ್ನು ಸಂಹರಿಸಿರುವ ಅಕ್ರಮ ಗಣಿಗಾರಿಕೆ ವರದಿಗೆ ಒಂದು ತಾರ್ಕಿಕ ಅಂತ್ಯ ಕಲ್ಪಿಸಬೇಕಾದ ಹೊಣೆಗಾರಿಕೆ ಅವರ ಮೇಲಿದೆ. ಹೀಗಾಗಿ ಅವರು ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ. ತನ್ಮೂಲಕ ಸರಕಾರವನ್ನು ಮತ್ತಷ್ಟು ಬೆತ್ತಲುಗೊಳಿಸುವ ಅವಕಾಶ ಅವರಿಗೆ ಒದಗಿ ಬಂದಿದೆ. id='are-slot-1' class='oiad oi-axt oiadv'> id='top-searched-articles'>ಗಮನಾರ್ಹವೆಂದರೆ
ಅಡ್ವಾಣಿ ರಥ ಯಾತ್ರೆ ಅಕ್ಟೋಬರ್ 30ಕ್ಕೆ ಕರ್ನಾಟಕಕ್ಕೆ ಬರಲಿದೆ. ಇಂತಹ ಸಂದರ್ಭದಲ್ಲಿ ಅಡ್ವಾಣಿ ಅವರ ಮಾನಸ ಪುತ್ರನ ಬಗ್ಗೆ ಅವರದೇ ಪಕ್ಷದ ಸರಕಾರ ಕೊಂಕು ತೆಗೆದಿದೆ. ನೋಡಬೇಕು ಏನೆಲ್ಲ ಆಗುತ್ತದೂ!?











Click it and Unblock the Notifications