ಬಿಜೆಪಿ ಮಾಜಿ ಸಂಸದ, ಐಎಎಸ್ ಅಧಿಕಾರಿ ವರ್ಮಾ ಆತ್ಮಹತ್ಯೆ

bjp-mp-ias-officer-sushil-chandra-varma-commit-suicide
ಭೂಪಾಲ್, ಅ.8: ಮಧ್ಯ ಪ್ರದೇಶ ಜನಾನುರಾಗಿ ಅಧಿಕಾರಿ, ಸಂಸದ ಸುಶೀಲ್ ಚಂದ್ರ ವರ್ಮಾ (87) ಅವರು ಅನಾರೋಗ್ಯದ ಕಾರಣ ಗುರುವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭೂಪಾಲ್ ಕ್ಷೇತ್ರದಿಂದ 4 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಬಿಜೆಪಿಯ ಈ ಹಿರಿಯ ನಾಯಕ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರ್ಮಾ ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿಯನ್ನು ಅಗಲಿದ್ದಾರೆ

1949 ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದ ವರ್ಮಾ ಅವರು ರಾಜ್ಯ ಕಾರ್ದರ್ಶಿಯಾಗಿ ಸೇವೆಸಲ್ಲಿಸಿದ್ದರು. ಗುರುವಾರ ತಮ್ಮ ಮನೆಯ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಅವರನ್ನು ತೀವ್ರ ಗಾಯಗೊಂಡ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಭೂಪಾಲ್ ನಗರ ಪೋಲಿಸ್ ಮುಖ್ಯಸ್ಥ ಯೋಗಿಶ್ ಚೌಧರಿ ತಿಳಿಸಿದ್ದಾರೆ.

ಸುಶೀಲ್ ಚಂದ್ರ ವರ್ಮಾ ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿಟ್ಟಿದ್ದು ಅನಾರೋಗ್ಯ ಮತ್ತು ಮಾನಸಿಕ ಖಿನ್ನತೆಯೇ ಆತ್ಮಹತ್ಯೆ ನಿರ್ಧಾರಕ್ಕೆ ಕಾರಣ ಎಂದು ಬರೆದಿಟ್ಟಿದ್ದಾರೆ. ನಿವೃತ್ತಿಯ ನಂತರ ವರ್ಮಾ 1989, 1991, 1996, 1998 ರಲ್ಲಿ ಇಲ್ಲಿಂದ ಸಂಸತ್ ಸದಸ್ಯರಾಗಿ ದಾಖಲೆಯ ಮತಗಳಿಂದ ಆಯ್ಕೆಯಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದ ವರ್ಮಾ 6 ಪುಸ್ತಕಗಳನ್ನು ಬರೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+