ಅಡ್ವಾಣಿ ಯಾತ್ರೆ ಕರ್ನಾಟಕದಿಂದ ಆರಂಭವಾಗಲಿ: ಕಾಂಗ್ರೆಸ್

"ಬಿಜೆಪಿ ನಾಯಕರುಗಳಾದ ದಿಲಿಪ್ ಸಿಂಗ್ ಜುಬೆವೊ, ಬಂಗಾರು ಲಕ್ಷ್ಮಣ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ರೆಡ್ಡಿ ಸಹೋದರರು ಈ ರಥಯಾತ್ರೆಯ ಮುಂಚೂಣಿಯಲ್ಲಿರಬೇಕು. ಇವರೆಲ್ಲ ಭ್ರಷ್ಟಾಚಾರದ ಮುಂದಾಳುಗಳು" ರಶೀದ್ ಆಲ್ವಿ ವರದಿಗಾರರ ಮುಂದೆ ಕರ್ನಾಟಕ ಬಿಜೆಪಿಯನ್ನು ವಿಡಂಬಿಸಿದ್ದಾರೆ.
38 ದಿನಗಳ ಯಾತ್ರೆಯ ಕುರಿತು ಬಿಜೆಪಿ ಮಾಹಿತಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಕಾಂಗ್ರೆಸ್ ಹೀಗೆ ಟೀಕೆ ಆರಂಭಿಸಿದೆ. ಅಡ್ವಾಣಿ ಅವರ ಜನ ಚೇತನ ಯಾತ್ರೆ ಅಕ್ಟೋಬರ್ 11ರಿಂದ ಆರಂಭವಾಗಲಿದೆ.
ಅ.11ರಂದು ಸಮಾಜವಾದಿ ನಾಯಕ ಜೈ ಪ್ರಕಾಶ್ ನಾರಾಯಣ್ ಅವರ ಹುಟ್ಟೂರಾದ ಸಿತಾಬ್ ದಿಯಾರಾದಲ್ಲಿ ಬಿಹಾರ್ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಒಟ್ಟಾರೆ 23 ರಾಜ್ಯಗಳು, 100 ಜಿಲ್ಲೆಗಳು, ಕೇಂದ್ರಾಡಳಿತ ಪ್ರದೇಶ ಸುತ್ತುವ ಅಡ್ವಾಣಿ ಅವರ ರಥ ಒಟ್ಟು 7600 ರಿಂದ 12,000 ಕಿ.ಮೀ ಕ್ರಮಿಸಲಿದೆ. ಉತ್ತರ ಪ್ರದೇಶ, ಉತ್ತರಾಖಂಡ್, ಪಂಜಾಬ್, ಗೋವಾ, ಕರ್ನಾಟಕ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಲ ಹಾಗೂ ಅಸ್ಸಾಂ ಪ್ರಮುಖ ನಿಲುಗಡೆ ಸ್ಥಾನಗಳಾಗಿವೆ.











Click it and Unblock the Notifications