ನಮ್ಮೆಲ್ಲರ ಪರಿಪೂರ್ಣ ಗುರು ಪ್ರಕೃತಿಮಾತೆ

World green building week
ಮಂಗಳೂರು, ಅ. 5 : ಬ್ಯಾರಿಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜೀ (ಬಿ.ಐ.ಟಿ) ಆಶ್ರಯದಲ್ಲಿ "ವರ್ಲ್ಡ್ ಗ್ರೀನ್ ಬಿಲ್ಡಿಂಗ್ ವೀಕ್" (ಸೆ.19 - ಸೆ. 23) ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಅತ್ಯಂತ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ನಮ್ಮೆಲ್ಲರ ಮೊದಲ ಹಾಗೂ ಪರಿಪೂರ್ಣ ಗುರು-ಪ್ರಕೃತಿಮಾತೆ. ವಿದ್ಯಾರ್ಥಿಗಳ ಸಂಪೂರ್ಣ ಬೆಳವಣಿಗೆಗೆ ಪ್ರಕೃತಿಯ ಕೊಡುಗೆಯನ್ನು ಮನದಟ್ಟು ಮಾಡಿಸಿದಾಗ ಮಾತ್ರ ಅವರು ಶಾಂತಿಯುತ, ಅಭಿವೃದ್ದಿದಾಯಕ ಹಾಗೂ ಹಸಿರು ಸಮಾಜವನ್ನು ಕಟ್ಟಬಲ್ಲರು, ಮುಂದಿನ ನಾಯಕರಾಗಬಹುದು ಎನ್ನುವುದು ಬಿಐಟಿ ಸಂಸ್ಥಾಪಕರೂ, ವರ್ಲ್ಡ್ ಗ್ರೀನ್ ಬಿಲ್ಡಿಂಗ್ - ಕರ್ನಾಟಕ ಇದರ ಅದ್ಯಕ್ಷರೂ ಆದ ಸಯ್ಯೆದ್ ಮಹಮ್ಮದ್ ಬ್ಯಾರಿಯವರ ಅಂತರಾಳದ ಮಾತು.

'ವರ್ಲ್ಡ್ ಗ್ರೀನ್ ಬಿಲ್ಡಿಂಗ್ ವೀಕ್" ಇದರ ಆಚರಣೆಯ ಅಂಗವಾಗಿ ಬ್ಯಾರಿಸ್ ಇನ್ಸ್ಟಿಟ್ಯೂಟ್ ನಲ್ಲಿ BIT-Green clubನ ವಿದ್ಯಾರ್ಥಿಗಳು ಗಿಡನೆಡುವ ಮೂಲಕ ಬ್ಯಾರಿಸ್ ಕಾಲೇಜಿನಲ್ಲಿ ಹಸಿರುಕ್ರಾಂತಿಯ ಸಂದೇಶವನ್ನು ಸಾರಿದರು. ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿ, ಗ್ರೀನ್‍ಕ್ಲಬ್ ನ ಶಿಕ್ಷಕ ಸಂಚಾಲಕರಾದ ಶೇಖ್ ಮ್ಯೊದೀನ್ ಕೆ. ಯಮ್ ಮಾತನಾಡಿ, ಜೀವನವನ್ನು ಅರ್ಥಮಾಡಬೇಕಾದರೆ ಪ್ರಕೃತಿಯನ್ನು ಅರ್ಥಮಾಡಿಕೊಳ್ಳಬೇಕು ಎಂಬ ಸಂದೇಶವನ್ನು ನೀಡಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ 'ಅಮೆರಿಕನ್ ಗ್ರೀನ್ ಬಿಲ್ಡಿಂಗ್ ಕೌನ್ಸೀಲ್‍ನ ಮ್ಯಾನೇಜರ್ ವಿನೋದ್ ಅರಾನ್ಹ ಅವರು ಹಸಿರು ವಿಶ್ವ ಎಂದರೆ ನೈಸರ್ಗಿಕ ಸಂಪತ್ತಿನ ಅಧಿಕಬಳಕೆಯ ಜೊತೆಗೆ ಪ್ರಕೃತಿಯ ಬೆಳವಣಿಗೆಗೆ ಆದ್ಯತೆ ನೀಡುವುದು ಎಂದರು. ಹಸಿರು ಕಟ್ಟಡಗಳಲ್ಲಿ ನೈಸರ್ಗಿಕ ಗಾಳಿ, ನೀರು, ಸೌರಶಕ್ತಿ ಬೆಳಕು ಇತ್ಯಾದಿಗಳನ್ನು ಅಧಿಕ ಪ್ರಮಾಣದಲ್ಲಿ ಬಳಸಿ ಕೃತಕಬೆಳಕು, ಗಾಳಿಗಳನ್ನು ಕಡಿಮೆ ಬಳಸುವ ಮೂಲಕ ಖರ್ಚು ಕಡಿಮೆಯಾಗುತ್ತದೆ ಎಂದರು.

'ಥಿಂಕ್ ಗ್ಲೋಬಲೀ, ಆಕ್ಟ್ ಲೋಕಲಿ". ಇಡೀ ವಿಶ್ವದ ಬಗ್ಗೆ ಚಿಂತಿಸಿ ನಮ್ಮ ಕ್ಷೇತ್ರದಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕಾಗಿದೆ ಎನ್ನುವುದು ವಿದ್ಯಾರ್ಥಿಗಳಿಗೆ ಅವರ ಕಿವಿಮಾತು. ಸಂಸ್ಥೆಯ ಪ್ರಾಂಶುಪಾಲರಾದ ಡಾ:ಎಸ್. ಕೆ ರಾಯ್ಕರ್ ಮಾತನಾಡಿ Reduce, Reuse, Recycle ಎನ್ನುವ ಮೂರು ಶಬ್ದಗಳ ನಿಜವಾದ ಅರ್ಥವನ್ನು ವಿವರಿಸಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+