ಬೆಂಗ್ಳೂರ್ ಸುತ್ತ 10 ಸಾವಿರ ಮನೆ : ಸೋಮಣ್ಣ

ಯಲಹಂಕ, ಯಶವಂತಪುರ, ಆನೇಕಲ್, ದೇವನಹಳ್ಳಿ, ನೆಲಮಂಗಲ, ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಗೃಹ ಮಂಡಳಿಯಿಂದ 10 ಸಾವಿರ ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ.
ನೆಲಮಂಗಲ, ತಾವರೆಕರೆ, ದೊಡ್ಡ ಆಲದಮರ, ಕೋಲಾರದ ಬಂಗಾರಪೇಟೆ, ಕೋಲಾರ, ತುಮಕೂರಿನ ಶಿರಾ, ಕುಣಿಗಲ್, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯದಲ್ಲಿ ಡಿಮ್ಯಾಂಡ್ ಸರ್ವೆ(ಬೇಡಿಕೆ ಸಮೀಕ್ಷೆ) ನಡೆಸಿ ಜನರ ಬೇಡಿಕೆಗೆ ಅನುಗುಣವಾಗಿ ನಿವೇಶನಗಳು ಹಾಗೂ ಮನೆಗಳ ನಿರ್ಮಾಣ ಮಾಡಲಾಗುವುದು ಎಂದು ಸೋಮಣ್ಣ ತಿಳಿಸಿದ್ದಾರೆ.
KHB ಲೇಔಟ್ ಗಳಲ್ಲಿ ಶೇ. 30 ರಷ್ಟು ಗೃಹ ನಿರ್ಮಾಣದ ಜವಾಬ್ದಾರಿಯನ್ನು ಗೃಹ ಮಂಡಳಿಯೇ ಹೊರಲಿದೆ. ಅ.15ರಂದು ಬೋರ್ಡ್ ಮೀಟಿಂಗ್ ನಂತರ ಮುಂದಿನ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದು ಸೋಮಣ್ಣ ಹೇಳಿದರು.












Click it and Unblock the Notifications