ಕೊಪ್ಪಳ ಉಪ ಚುನಾವಣೆ : ಯಾವ ಸೀಟು ಯಾರ ಮುಡಿಗೊ

ಯಡಿಯೂರಪ್ಪ ಅವರ ಅಣತಿಯಂತೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ ಕರಡಿ ಸಂಗಣ್ಣನವರಿಂದಾಗಿ ಉಪ ಚುನಾವಣೆ ಇಲ್ಲಿ ಉದ್ಭವಿಸಿತ್ತು. ಹೀಗಾಗಿ ಈ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಎಲ್ಲಾ ಪಕ್ಷಗಳಿಗೆ ಮಾತ್ರವಲ್ಲ, ಯಡಿಯೂರಪ್ಪನವರಿಗೆ ಕೂಡ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಒಂದು ವೇಳೆ ಬಿಜೆಪಿ ಗೆದ್ದರೂ ಕೂಡ ಗೆಲುವಿನ ಶ್ರೇಯ ಯಡಿಯೂರಪ್ಪನವರಿಗೆ ದಕ್ಕುವುದೋ ಅಥವಾ ಸದಾನಂದ ಗೌಡರಿಗೆ ದಕ್ಕುವುದೋ ಎಂಬ ಕುತೂಹಲವೂ ಮನೆಮಾಡಿದೆ.
ಪ್ರಮುಖವಾಗಿ ಬಿಜೆಪಿಯಿಂದ ಕಣದಲ್ಲಿದ್ದ ಕರಡಿ ಸಂಗಣ್ಣ, ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಬಸವರಾಜ್ ಹಿಟ್ನಾಳ್ ಮತ್ತು ಜೆಡಿಎಸ್ ಪಕ್ಷದಿಂದ ಪ್ರದೀಪ್ ಗೌಡ ಅವರ ಹಣೆಬರಹವನ್ನು ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಮತದಾರರು ಹುದುಗಿಸಿಟ್ಟಿದ್ದಾರೆ. ಒಟ್ಟು 14 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಗವಿಸಿದ್ದೇಶ್ವರ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತಎಣಿಕೆ ಆರಂಭವಾಗಲಿದೆ. ಮತಎಣಿಕೆ ಕೇಂದ್ರದ ಸುತ್ತ ಭಾರೀ ಬಿಗಿಭದ್ರತೆ ಒದಗಿಸಲಾಗಿದೆ.
ಜಯ ಯಾರ ಪಾಲಾಗಲಿದೆ ಎಂಬುದನ್ನು ತಿಳಿಯಲು ದಟ್ಸ್ ಕನ್ನಡ ವೆಬ್ ಸೈಟ್ ನೋಡುತ್ತಿರಿ. ಕ್ಷಣಕ್ಷಣದ ರೋಚಕ ಬೆಳವಣಿಗಳನ್ನು ಕನ್ನಡ ಟ್ವಿಟ್ಟರ್ ಮುಖಾಂತರವೂ ತಿಳಿಯಿರಿ.












Click it and Unblock the Notifications