ನೀರಿಲ್ಲ ನೆರಳಿಲ್ಲ, ಚಿತ್ರದುರ್ಗ ಬರಪೀಡಿತ ಜಿಲ್ಲೆ

Chitraduga drought-hit district
ಚಿತ್ರದುರ್ಗ, ಸೆ. 28 : ಏಳು ಸುತ್ತಿನ ಕೋಟೆ ಇರುವ ಜಿಲ್ಲೆಯ ಆರು ತಾಲೂಕುಗಳಲ್ಲಿ ನಾಲ್ಕು ತಾಲೂಕುಗಳ ಮೇಲೆ ವರುಣ ಕೃಪೆ ತೋರದಿರುವ ಕಾರಣ ಇಡೀ ಚಿತ್ರದುರ್ಗ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸಲು ಸರಕಾರ ನಿರ್ಧರಿಸಿದೆ. ಈ ಕುರಿತು ಪ್ರಕಟಣೆ ಹೊರಬೀಳಬೇಕಿದೆ.

ಮಳೆ ಕೈಕೊಟ್ಟಿದ್ದರಿಂದ ಚಿತ್ರದುರ್ಗ, ಹೊಸದುರ್ಗ, ಮೊಳಕಾಲ್ಮೂರು, ಹೊಳಲ್ಕೆರೆ, ಚಳ್ಳಕೆರೆ, ಹಿರಿಯೂರು ತಾಲೂಕುಗಳಲ್ಲಿ ನಿಂತಿರುವ ಪೈರುಗಳು ಒಣಗಿವೆ. ಇದರಿಂದ 432 ಕೋಟಿ ರು.ನಷ್ಟು ನಷ್ಟವಾಗಿದೆ.

ಜಿಲ್ಲೆಯಾದ್ಯಂತ ಜನರು ಕುಡಿಯುವ ನೀರಿನ ತೀವ್ರ ಕೊರತೆ ಎದುರಿಸುತ್ತಿದ್ದಾರೆ ಎಂದು ಮೀನುಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಆಸ್ನೋಟಿಕರ್ ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಆಸ್ನೋಟಿಕರ್, ನಷ್ಟವಾಗಿರುವ ಬೆಳೆಗಳ ಸರ್ವೇ ಕೂಡ ಮಾಡಲಾಗಿದ್ದು, ಸಂತ್ರಸ್ತ ರೈತರಿಗೆ ಸದ್ಯದಲ್ಲಿಯೇ ಪರಿಹಾರ ಒದಗಿಸಲಾಗುವುದು ಎಂದು ನುಡಿದರು.

ಈಗಾಗಲೆ 2 ಕೋಟಿ ರು. ಸರಕಾರದಿಂದ ಬಿಡುಗಡೆ ಮಾಡಲಾಗಿದ್ದು, ಇನ್ನಷ್ಟು ನೀಡುವುದಾಗಿ ಸದಾನಂದ ಗೌಡ ತಿಳಿಸಿದ್ದಾರೆ ಎಂದರು.

ಇದಲ್ಲದೆ, ಕುಡಿಯುವ ನೀರಿನ ಪೂರೈಕೆ, ಮೇವಿನ ಬ್ಯಾಂಕ್ ಸ್ಥಾಪಿಸಲು ಮತ್ತು ದನಕರುಗಳಿಗೆ ಆಸರೆ ಒದಗಿಸಲು 20.5 ಕೋಟಿ ರು. ಬಿಡುಗಡೆ ಮಾಡಬೇಕೆಂದು ಸರಕಾರವನ್ನು ಕೋರಲಾಗಿದೆ ಎಂದು ಆಸ್ನೋಟಿಕರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+