ಕಣ್ಣೂರು ಜೈಲು, ಪರಪ್ಪನ ಅಗ್ರಹಾರ ಉಗ್ರ ನಂಟು

ಇತ್ತೀಚಿನ ದೆಹಲಿ ಕೋರ್ಟ್ ಬಳಿ ಸ್ಫೋಟದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ(NIA) ಈ ಆತಂಕಕಾರಿ ಅಂಶವನ್ನು ಹೊರಗೆಡವಿದ್ದಾರೆ.
ಸುಳಿವು ಕೊಟ್ಟ ಪತ್ರ: ಫೋನ್ ಅಥವಾ ಪತ್ರದ ಮೂಲಕ ಪರಸ್ಪರ ಸಂಪರ್ಕವಿರಿಸಿಕೊಂಡಿರುವ ಸುಳಿವು ಸಿಕ್ಕಿದೆ. ಕುಖ್ಯಾತ ಅಂತರ್‌ರಾಜ್ಯ ಕ್ರಿಮಿನಲ್ ಆರೋಪಿ ಪೆರಿಯಾತಡ್ಕ ರಿಯಾಸ್ ಎಂಬಾತನನ್ನು ಕಣ್ಣೂರಿನಿಂದ ವಿಯ್ಯೂರು ಜೈಲಿಗೆ ಕೊಂಡೊಯ್ಯುವ ಸಂದರ್ಭ ಆತನ ಜೇಬಿನಲ್ಲಿ ಪತ್ರವೊಂದು ಪತ್ತೆಯಾಗಿದೆ.
ಇದನ್ನು ಕಲ್ಲಿಕೋಟೆ ಸರಣಿ ಸ್ಫೋಟ ಪ್ರಕರಣದ ಆರೋಪಿ ತಡಿಯಂದವೀಡ ನಜೀರ್ ಎಂಬಾತ ಬೆಂಗಳೂರು ಸ್ಫೋಟ ಪ್ರಕರಣದ ಆರೋಪಿ ಲಷ್ಕರ್ ಉಗ್ರ ಸಫ್ರಾಜ್ ನವಾಜ್‌ಗೆ ಬರೆದಿದ್ದು ಎಂದು ತಿಳಿದುಬಂದಿದೆ.
ಖೈದಿಗಳಿಗೆ ಸಂಪರ್ಕ ಸಾಧಿಸಲು ಫೋನ್ ನೀಡುತ್ತಿದ್ದ ಆರೋಪದ ಮೇಲೆ ನಾಲ್ವರು ಜೈಲು ಸಿಬ್ಬಂದಿಯನ್ನು ಈಗಾಗಲೇ ವರ್ಗಾಯಿಸಲಾಗಿದೆ. ಜೈಲಿನ ಅಧಿಕಾರಿ, ಕೇರಳದ ಪೊಲೀಸ್ ಇಲಾಖೆಯ ಕೆಲವು ಮಂದಿಯೂ ಇದೇ ರೀತಿ ಉಗ್ರರ ಜೊತೆ ಸಂಪರ್ಕವಿರಿಸಿದ್ದಾರೆ ಎನ್ನಲಾಗುತ್ತಿದೆ.
ಲಷ್ಕರ್ ಉಗ್ರರಾದ ನಜೀರ್ ಹಾಗೂ ಸಫ್ರಾಜ್ ನವಾಜ್ ಇಬ್ಬರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.












Click it and Unblock the Notifications