ಓಎಂಸಿ ಮೇಲೆ ಮತ್ತೆ ಸಿಬಿಐ ದಾಳಿ, ಡಿಸ್ಕ್ ವಶ

CBI raid OMC office Bellary
ಬಳ್ಳಾರಿ, ಸೆ.26: ಓಬಳಾಪುರಂ ಮೈನಿಂಗ್ ಕಂಪನಿ ಮೇಲೆ ಭಾನುವಾರ ಮತ್ತೆ ಸಿಬಿಐ ತಂಡ ದಾಳಿ ನಡೆಸಿದೆ.

ಓಎಂಸಿ ಕಂಪನಿಯ ಎಂಡಿ ಶ್ರೀನಿವಾಸ ರೆಡ್ಡಿ ಹಾಗೂ ಮಾಲೀಕ ಜನಾರ್ದನ ರೆಡ್ಡಿ ಅವರು ಇನ್ನೂ ವಿಚಾರಣಾಧೀನ ಖೈದಿಗಳಾಗಿ ಹೈದರಾಬಾದಿನಲ್ಲಿದ್ದಾರೆ. ಈ ನಡುವೆ ಮತ್ತೊಮ್ಮೆ ಓಎಂಸಿ ಕಚೇರಿ ಮೇಲೆ ದಾಳಿ ನಡೆದಿರುವುದು ಕುತೂಹಲ ಕೆರಳಿಸಿದೆ.

ಓಎಂಸಿ ಕಚೇರಿಯಲ್ಲಿದ್ದ ಸಿಡಿ, 4 ಹಾರ್ಡ್ ಡಿಸ್ಕ್, ಮೂರು ಕಂಪ್ಯೂಟರ್ ಸೇರಿದಂತೆ ಅಮೂಲ್ಯ ಕಡತಗಳನ್ನು ಸಿಬಿಐ ತನ್ನ ವಶಕ್ಕೆ ತೆಗೆದುಕೊಂಡಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಈ ಪರಿಕರಗಳು ಸಾಕ್ಷ್ಯವಾಗಿ ಬಳಸಲು ಸಿಬಿಐ ನಿರ್ಧರಿಸಿದೆ ಎನ್ನಲಾಗಿದೆ.

ಡಿ.10, 2009ರಲ್ಲೂ ಕೂಡಾ ಸಿಬಿಐ ತಂಡ ಓಎಂಸಿ ಕಚೇರಿ ಬಾಗಿಲು ಮುರಿದಿತ್ತು. ಈ ಬಾರಿ 11 ಮಂದಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕರ್ನಾಟಕದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿರುವ ಬೆನ್ನಲ್ಲೇ ಈ ರೀತಿ ದಾಳಿ ನಡೆದಿರುವುದು ಕುತೂಹಲ ಕೆರಳಿಸಿದೆ. ದಾಳಿ ಸಮಯದಲ್ಲಿ ವಶಪಡಿಸಿಕೊಂಡ ವಸ್ತುಗಳ ಬಗ್ಗೆ ಸಿಬಿಐ ತಂಡ ಅಧಿಕೃತವಾಗಿ ಇನ್ನೂ ಹೇಳಿಕೆ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+