ಹದ್ದು ಮೀರಿದ 'ಹಂಸ': ಈಶ್ವರಪ್ಪ ಆಕ್ರೋಶ

bjp-president-eshwarappa-takes-on-bhardwaj
ಶಿವಮೊಗ್ಗ, ಸೆ.26: ರಾಜ್ಯಪಾಲರ ಕರ್ತವ್ಯ, ಕಾರ್ಯವ್ಯಾಪ್ತಿ ಮತ್ತು ಇತಿಮಿತಿ ಕುರಿತು ಸ್ಪಷ್ಟನೆ ನೀಡುವಂತೆ ಹಾಗೂ ಅಗತ್ಯ ಬಿದ್ದಲ್ಲಿ ಸಂವಿಧಾನ ತಿದ್ದುಪಡಿ ತರುವಂತೆ ರಾಜ್ಯ ಬಿಜೆಪಿ ರಾಷ್ಟ್ರಪತಿಗಳಿಗೆ ಪತ್ರವೊಂದನ್ನು ಬರೆಯಲಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್‌. ಈಶ್ವರಪ್ಪ ಅವರು ಕರ್ನಾಟಕ ಮತ್ತು ಗುಜರಾತ್‌ ರಾಜ್ಯಪಾಲರ ವರ್ತನೆಯನ್ನು ಉದಾಹರಣೆಯಾಗಿಟ್ಟುಕೊಂಡು ಹೀಗೊಂದು ಅಪ್ಪಣೆ ಕೊಟ್ಟಿದ್ದಾರೆ. ರಾಜ್ಯಪಾಲರ ಹದ್ದುಮೀರಿದ ವರ್ತನೆ ಮತ್ತು ನಡವಳಿಕೆಯಿಂದಾಗಿ ಪ್ರಜಾಪ್ರಭುತ್ವದ ದುರುಪಯೋಗವಾಗುತ್ತಿದೆ ಎಂಬುದು ಅವರ ಗುರುತರ ಆರೋಪ.

ವಿರೋಧ ಪಕ್ಷಗಳು ಇರುವುದೇ ಆರೋಪ ಮಾಡುವುದಕ್ಕೆ. ಆದರೆ, ತಕ್ಷಣವೇ ಇವುಗಳಿಗೆಲ್ಲ ಪ್ರತಿಕ್ರಿಯಿಸುತ್ತಾ ವಿಪಕ್ಷ ನಾಯಕರಂತೆ ರಾಜ್ಯಪಾಲರು ನಡೆದುಕೊಳ್ಳುವುದು ಎಷ್ಟರಮಟ್ಟಿಗೆ ಸರಿ. ಗುಜರಾತ್‌ನಲ್ಲಿ ಅಲ್ಲಿನ ರಾಜ್ಯಪಾಲರು ತಮ್ಮ ಕಾರ್ಯವ್ಯಾಪ್ತಿ ಮೀರಿ ಲೋಕಾಯುಕ್ತರನ್ನು ನೇಮಿಸಿದರು. ಇಲ್ಲಿ ಹಂಸರಾಜ್‌ ಭಾರದ್ವಾಜ್‌ ಅಂದಿನಿಂದಲೂ ತಮ್ಮ ಕಾರ್ಯವ್ಯಾಪ್ತಿ ಮೀರುತ್ತಲೇ ಬಂದಿದ್ದಾರೆ. ಹದ್ದು ಮೀರಿ ವರ್ತಿಸುತ್ತಿದ್ದಾರೆ ಎಂದು ಈಶ್ವರಪ್ಪ ಗುಡುಗಿದರು.

ರಾಜ್ಯಪಾಲರೆಂದರೆ ಸರ್ವಾಧಿಕಾರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡುವ ರೀತಿಯಲ್ಲಿ ಇವರು ನಡೆದುಕೊಳ್ಳುತ್ತಿದ್ದಾರೆ. ಆ ಹುದ್ದೆಯ ದುರುಪಯೋಗ ನಡೆಯುತ್ತಿದೆ. ಅವರು ತಮ್ಮ ಇತಿಮಿತಿ ಯೋಚಿಸುತ್ತಿಲ್ಲ. ಅವರು ಮಾಡಬೇಕಾದ ಕೆಲಸ ಮಾಡುವುದನ್ನು ಬಿಟ್ಟು ಉಳಿದ ಕೆಲಸ ಮಾಡಲು ಬರುತ್ತಾರೆ ಎಂದು ವಾಗ್ಧಾಳಿ ನಡೆಸಿದ ಈಶ್ವರಪ್ಪ ರಾಜ್ಯಪಾಲರ ಕರ್ತವ್ಯದ ಬಗ್ಗೆ ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಿದ ಬಳಿಕ ಈ ಹುದ್ದೆಗೆ ಬರಬೇಕು. ರಾಷ್ಟ್ರಪತಿಗಳು ನೇಮಕ ಮಾಡುವಾಗ ಕೂಡ ಇಂತಹ ವ್ಯಕ್ತಿಗಳನ್ನೇ ಮಾಡಬೇಕು ಎಂದು ಒತ್ತಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+