2ಜಿ: ಗವರ್ನರ್ ಸುಬ್ಬರಾವ್ ವರದಿ ಉರುಳಾಗಲಿದೆಯೇ ಪ್ರಧಾನಿ ಸಿಂಗ್ ಗೆ

2g-scam-rbi-governor-expose-pm-singh-hand
ನವದೆಹಲಿ, ಸೆ.26: 2ಜಿ ಸ್ಪೆಕ್ಟ್ರಂ ಹಗರಣದ ಅತ್ಯಂತ ಮಹತ್ವದ ಸಾಕ್ಷ್ಯವನ್ನು ಆರ್ ಬಿಐ ಗವರ್ನರ್ ಡಿ. ಸುಬ್ಬರಾವ್ ಅವರು ಒದಗಿಸಿದ್ದಾರಾ!? ಇದರಿಂದ ಹಗರಣದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕೈವಾಡ ಸಾಬೀತಾಗಿದೆಯಾ? ಹೌದು, ಇದೆಲ್ಲ ನಿಜವಾಗುವ ಕಾಲ ಸನ್ನಿ'ಹಿತವಾಗಿದೆ' ಸಿಬಿಐಗೆ.

ರಾಜಾ, ಕನ್ನಿಮೋಳಿ ಅವರಷ್ಟೇ ಹಗರಣದ ಸೂತ್ರಧಾರರಲ್ಲ. ಅವರಿಗೆ ಸಹಾಯ'ಹಸ್ತ' ಚಾಚಿರುವ ಧೀಮಂತರೂ ಇದ್ದಾರೆ. ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ದುವ್ವೂರಿ ಸುಬ್ಬರಾವ್ ಸಿಬಿಐ ನ್ಯಾಯಾಲಯಕ್ಕೆ ಮಹತ್ವದ ಸಾಕ್ಷ್ಯ ನೀಡಿದ್ದಾರೆ ಎಂದು ಸಿಬಿಐ ಸೋಮವಾರ ಹೇಳಿದೆ.

ಯುಪಿಎ ಸರಕಾರ ಇಡೀ 2ಜಿ ಹಗರಣದಿಂದ ಸರಕಾರಿ ಬೊಕ್ಕಸಕ್ಕೆ ನಯಾ ಪೈಸೆ ನಷ್ಟವಾಗಿಲ್ಲ ಎಂದೇ ಇದುವರೆಗೆ ಹೇಳಿಕೊಂಡು ಬಂದಿದೆ. ಆದರೆ 2008ರ ಆರ್ ಬಿಐ ರಿಪೋರ್ಟ್ ಪ್ರಕಾರ ಬೊಕ್ಕಸಕ್ಕೆ 31,000 ಕೋಟಿ ರುಪಾಯಿ ನಷ್ಟ ಉಂಟಾಗಿರುವುದು ದೃಢಪಟ್ಟಿದೆ.

ಇದು ಕಾನೂನಾತ್ಮಕವಾಗಿ ಇದು ಅತ್ಯಂತ ಮಹತ್ವದ ಸಾಕ್ಷ್ಯವಾಗಲಿದ್ದು, ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಈಗಾಗಲೇ ದಾಖಲಾಗಿರುವ ಆರೋಪಪಟ್ಟಿಯಲ್ಲಿ ಅಡಕವಾಗಿದೆ. ಈ ಸಂಬಂಧ ಸದ್ಯದಲ್ಲೇ ಸುಬ್ಬರಾವ್ ಅವರು ಕೋರ್ಟಿನಲ್ಲಿ ಹಾಜರಾಗಿ, ಸಾಕ್ಷ್ಯ ನುಡಿಯಲಿದ್ದಾರೆ ಎಂದು ಸಿಬಿಐ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+