ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿ ಅಕ್ರಮಗಳಿಗೆ ನೀರೆರೆದ ಆಂಧ್ರ ಅಧಿಕಾರಿಗಳ ಸಾಚಾತನ ಬಯಲು

By Srinath
|
Google Oneindia Kannada News

reddy-andhra-mines-officials-tamper-documents-cbi
ಅನಂತಪುರ, ಸೆ.24 : ಕರ್ನಾಟಕದಲ್ಲಿ ಜನಾರ್ದನ ರೆಡ್ಡಿಯ ಅಡಿಯಾಳಾಗಿ ಸರಕಾರಿ ದಾಖಲೆಗಳನ್ನು ತಿದ್ದಿ, ಅಕ್ರಮ ಗಣಿಗಾರಿಕೆಗೆ ನೀರೆರೆದ ಆರೋಪದಲ್ಲಿ ಅಧಿಕಾರಿಗಳನ್ನು ಹಿಂಡುಹಿಂಡಾಗಿ ಮನೆಗೆ ಕಳಿಸಲಾಗಿದೆ. ಇದೇ ಸಂದರ್ಭದಲ್ಲೇ ಅತ್ತ ಆಂಧ್ರದ ಅಧಿಕಾರಿಗಳೂ ನಾವು ಯಾರಿಗೂ ಕಮ್ಮಿಯಿಲ್ಲ ಎಂಬಂತೆ ರೆಡ್ಡಿಗೆ ನೆರವಾಗಿರುವುದು ಸಾಕ್ಷ್ಯ ಸಮೇತ ಬಟಾಬಯಲಾಗಿದೆ.

ಬಳ್ಳಾರಿ ಹಾಗೂ ಅನಂತಪುರ ಜಿಲ್ಲೆಗಳಲ್ಲಿ ಮಾಜಿ ಸಚಿವ ಜನಾರ್ದನರೆಡ್ಡಿ ನಡೆಸಿರುವ ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐಗೆ ಅನೇಕ ಮಹತ್ವದ ಸಾಕ್ಷ್ಯಗಳು ಲಭ್ಯವಾಗುತ್ತಿವೆ. ಆತಂಕದ ವಿಷಯವೆಂದರೆ, ಆಂಧ್ರದ ಗಣಿ ಮತ್ತು ಭೂಗರ್ಭ ಇಲಾಖೆಯ ಅಧಿಕಾರಿಗಳು ಅನಂತಪುರ ಜಿಲ್ಲೆಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ಪರವಾನಗಿ ನೀಡುವ ಸಂದರ್ಭದಲ್ಲಿ ಕಡತಗಳನ್ನು ಜನಾ ರೆಡ್ಡಿಯ ಪರವಾಗಿ ತಿದ್ದಿದ್ದಾರೆ.

ಈ ಅಕ್ರಮದಿಂದಾಗಿ ಪರವಾನಗಿ ವಂಚಿತರಾದ ಉದ್ಯಮಿ ಸಿ. ಶಶಿಕುಮಾರ್ ಸಿಬಿಐ ಎದುರು ಹಾಜರಾಗಿ ಕಳ್ಳ ವ್ಯವಹಾರಗಳನ್ನು ಒಂದೊಂದಾಗಿ ಬಿಚ್ಚಿಟ್ಟುತ್ತಿರುವುದಾಗಿ ಸಿಬಿಐ ಮೂಲಗಳು ತಿಳಿಸಿವೆ. ಇಲಾಖೆಯ ಅಧಿಕಾರಿಗಳು ಈರೀತಿ ಸಿದ್ಧಪಡಿಸಿದ್ದ ಎರಡು ವಿಭಿನ್ನ ಕಡತಗಳನ್ನು ಶಶಿಕುಮಾರ್ ಸಿಬಿಐಗೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ.

2009ರಲ್ಲಿ ಜಿಲ್ಲೆಯ ಡಿ. ಹೀರೇಲಾಲ್ ಮಂಡಲದ ಎಚ್. ಸಿದ್ದಾಪುರಂ ಮತ್ತು ಮಲ್ಲಪ್ಪನಗುಡಿ ಗಣಿ ಪ್ರದೇಶದಲ್ಲಿ ಗಣಿಗಾರಿಕೆ ಗುತ್ತಿಗೆಗೆ ಕೋರಿದ್ದ ಉದ್ಯಮಿಗಳಿಗೆ ಇಲಾಖೆಯು ನೀಡಿರುವ ಟಿಪ್ಪಣಿಯೇ ಬೇರೆ. ಈ ಟಿಪ್ಪಣಿಯಿದ್ದ ಕಡತದ ನಕಲನ್ನು ಶಶಿಕುಮಾರ್ 2008ರಲ್ಲಿ ಮಾಹಿತಿ ಹಕ್ಕು ಅನುಸಾರ ಪಡೆದುಕೊಂಡಿದ್ದರು.

ಒಂದು ವರ್ಷದ ಬಳಿಕ ಮತ್ತೊಮ್ಮೆ ಶಶಿಕುಮಾರ್ 2009ರಲ್ಲಿ ಮಾಹಿತಿ ಕಾಯಿದೆ ಹಕ್ಕು ಅನುಸಾರ ಇದೇ ಮಾಹಿತಿಯನ್ನು ಕೋರಿದ್ದರು. ಆಶ್ಚರ್ಯವೆಂದರೆ ಎರಡನೇ ಬಾರಿ ನೀಡಿರುವ ಮೊದಲ ಮಾಹಿತಿಗಿಂತ ಭಿನ್ನವಾಗಿತ್ತು!

ಹೀಗೇಕೆ ಮಾಡಿದ್ದಾರೆಂದರೆ ಅಧಿಕಾರಿಗಳು ಜನಾ ರೆಡ್ಡಿಗೆ ನೆರವಾಗುವ ಸಲುವಾಗಿ ಕಡತಗಳನ್ನು ತಿದ್ದಿದ್ದಾರೆ. ಇದರಿಂದ ನಮ್ಮಂತಹ ಗಣಿ ಉದ್ಯಮಿಗಳಿಗೆ ಪರವಾನಗಿ ದೊರೆಯದೆ ನಷ್ಟವುಂಟಾಯಿತು ಎಂದು ಶಶಿಕುಮಾರ್ ಸಿಬಿಐ ಎದುರು ಹಾಜರಾಗಿ ಅಲವತ್ತುಕೊಂಡಿದ್ದಾರೆ.

English summary
Mines and Geology Department officials have allegedly tampered the common note files pertaining to the grant of iron ore mining leases in Anantapur district. C. Shashi Kumar, who was denied license by the department, deposed before CBI and submitted two variant common note files that were allegedly tampered by the mining officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X