ಹುಬ್ಬಳ್ಳಿಯಲ್ಲಿ ಪಿಸಿ ರಾಜೀನಾಮೆಗೆ ಅನಂತ್ ಪಟ್ಟು
ಹುಬ್ಬಳ್ಳಿ,
ಸೆ. 24 : 2ಜಿ ತರಂಗಗುಚ್ಛ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ತೀವ್ರ ಟೀಕೆಗೆ ಒಳಗಾಗಿರುವ ಕೇಂದ್ರ ಗೃಹ ಸಚಿವ ಪಿ ಚಿದಂಬರಂ ಅವರು ಕೂಡಲೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಅವರು ಹುಬ್ಬಳ್ಳಿಯಲ್ಲಿ ಆಗ್ರಹಿಸಿದ್ದಾರೆ. id="toptextpromo">ಕೊಪ್ಪಳ
ಉಪ ಚುನಾವಣೆ ಪ್ರಚಾರಕ್ಕೆ ತೆರಳುವ ಮೊದಲು ಶನಿವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅನಂತ್, 2ಜಿ ಹಗರಣದ ಬಗ್ಗೆ ಇಂಚಿಂಚು ತಿಳಿದಿದ್ದರೂ ಕಣ್ಮುಚ್ಚಿ ಕುಳಿತಿದ್ದ ಚಿದಂಬರಂ, ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು. id='are-slot-1' class='oiad oi-axt oiadv'> id='top-searched-articles'>ಚಿದಂಬರಂ
ಇಷ್ಟಪಟ್ಟಿದ್ದರೆ 2ಜಿ ಹಗರಣಕ್ಕೆ ತಡೆ ಒಡ್ಡಬಹುದಿತ್ತು ಎಂದು ಪ್ರಣಬ್ ಮುಖರ್ಜಿ ಹೇಳಿರುವುದು ವಿತ್ತ ಸಚಿವರನ್ನು ಭಾರೀ ಇಕ್ಕಟ್ಟಿಗೆ ಸಿಲುಕಿಸಿದೆ. ತನಿಖಾ ಸಂಸ್ಥೆ ಸಿಬಿಐ ಕೂಡ ಗೃಹ ಸಚಿವಾಲಯದ ಅಡಿಯಲ್ಲಿಯೇ ಬರುವುದರಿಂದ ಅನೇಕ ಹುಳುಕುಗಳು ಹೊರಗೆ ಬರುತ್ತಿಲ್ಲ ಎಂದು ಅನಂತ್ ಆಕ್ರೋಶ ವ್ಯಕ್ತಪಡಿಸಿದರು.











Click it and Unblock the Notifications