ರೆಡ್ಡಿ ಗಣಿ ಅಕ್ರಮ: ರಾಜ್ಯದಲ್ಲೂ ಸಿಬಿಐ ತನಿಖೆಗೆ ಇಂದು ಸುಪ್ರೀಂ ಆದೇಶ
ನವದೆಹಲಿ,
ಸೆ. 23: ಅಕ್ರಮ ಗಣಿಗಾರಿಕೆ ಕುರಿತು ಸುಪ್ರೀಂಕೋರ್ಟ್ ನೇಮಿಸಿರುವ ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ) ತನ್ನ ಅಂತಿಮ ವರದಿಯನ್ನು ಗುರುವಾರ ಸಲ್ಲಿಸಿದ್ದು, ಜನಾರ್ದನ ರೆಡ್ಡಿ ಒಡೆತನದ ಎಎಂಸಿ (ಅಸೋಸಿಯೇಟೆಡ್ ಮೈನಿಂಗ್ ಕಾರ್ಪೊರೇಷನ್) ನಡೆಸಿರುವ ಅಕ್ರಮಗಳನ್ನು ಬಯಲಿಗೆಳೆದಿದೆ. id="toptextpromo">ಕರ್ನಾಟಕದಲ್ಲಿ
ನಾವು ಗಣಿಗಾರಿಕೆಯನ್ನೇ ಮಾಡುತ್ತಿಲ್ಲ ಎನ್ನುತ್ತಿದ್ದ ಗಾಲಿ ಜನಾರ್ದನ ರೆಡ್ಡಿ ಕುಟುಂಬ ಕರ್ನಾಟಕದಲ್ಲೂ ಗಣಿಗಾರಿಕೆ ನಡೆಸಿದೆ. ಈ ಮೂಲಕ ಅಕ್ರಮವಾಗಿ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಿದೆ. ಆದ್ದರಿಂದ ರೆಡ್ಡಿಗೆ ಸೇರಿದ ಅಸೋಸಿಯೇಟೆಡ್ ಮೈನಿಂಗ್ ಕಾರ್ಪೊರೇಷನ್ ನಡೆಸಿರುವ ಗಣಿಗಾರಿಕೆ ಕುರಿತು ಸಿಬಿಐ ತನಿಖೆಯಾಗಬೇಕು ಎಂದು ಸಮಿತಿ ಸಲಹೆ ನೀಡಿದೆ. id='are-slot-1' class='oiad oi-axt oiadv'> id='top-searched-articles'>ಸುಪ್ರೀಂಕೋರ್ಟ್‌ನ
ಹಸಿರು ಪೀಠದ ಮುಂದೆ ಶುಕ್ರವಾರ ವರದಿಯ ಕುರಿತು ವಿಚಾರಣೆ ನಡೆಯಲಿದೆ. ಈವರೆಗೆ ಸಿಇಸಿ ಶಿಫಾರಸುಗಳು ಬಹುತೇಕ ಆದೇಶವಾಗಿ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಈ ಶಿಫಾರಸು ಸಹ ಆದೇಶವಾಗಿ ಹೊರಬೀಳುವ ಸಾಧ್ಯತೆ ಇದೆ. ಅಲ್ಲಿಗೆ ರೆಡ್ಡಿ ವಿರುದ್ಧ ತನಿಖೆ ನಡೆಸಲು ಕರ್ನಾಟಕದಲ್ಲೂ ಸಿಬಿಐ ಖೆಡ್ಡ ಸಿದ್ಧವಾಗಿದೆ.











Click it and Unblock the Notifications