ಶ್ವಾಸಕೋಶದಲ್ಲಿ ಕಫ: ಕೊಪ್ಪಳ ಪ್ರಚಾರಕ್ಕೆ ದೇವೇಗೌಡ ಹೋಗೊಲ್ಲ

ಎರಡು ದಿನಗಳಿಂದ ದೇವೇಗೌಡರಿಗೆ ಶ್ವಾಸಕೋಶದಲ್ಲಿ ಕಫ ತುಂಬಿ, ಕೆಮ್ಮು ಜಾಸ್ತಿಯಾಗಿರುವ ಕಾರಣ ಪ್ರಚಾರಕ್ಕೆ ತೆರಳುತ್ತಿಲ್ಲ. ಗೌಡರು ಈಗ ಸಂಪೂರ್ಣ ವಿಶ್ರಾಂತಿಯಲ್ಲಿದ್ದಾರೆ. ಪ್ರಚಾರಕ್ಕೆ ತೆರಳಿದರೆ ಅಲ್ಲಿ ಭಾಷಣ ಮಾಡುವಾಗ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ವೈದ್ಯರ ಸಲಹೆಯ ಮೇರೆಗೆ ಪ್ರಚಾರಕ್ಕೆ ತೆರಳುತ್ತಿಲ್ಲವೆಂದು ಜೆಡಿಎಸ್ ಮೂಲಗಳು ಹೇಳಿವೆ.
ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರ ವರದಿಯ ಹಿನ್ನೆಲೆಯಲ್ಲಿ ಮುಜುಗರಕ್ಕೆ ಗುರಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಗೆ ಹೈಕೋರ್ಟಿನಲ್ಲಿ ಜಾಮೀನು ಸಿಕ್ಕಿದ್ದರಿಂದ ಅವರೇ ಪ್ರಚಾರದ ಉಸ್ತುವಾರಿ ವಹಿಸಿದ್ದಾರೆ.
ಅವರೊಂದಿಗೆ ಮಹಾ ಪ್ರಧಾನ ಕಾರ್ಯದರ್ಶಿ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವರಾದ ಬಂಡೆಪ್ಪ ಕಾಶಂಪೂರ್, ಬಸವರಾಜ ಹೊರಟ್ಟಿ, ಶಾಸಕ ವೆಂಕಟರಾವ್ ನಾಡಗೌಡ, ವಕ್ತಾರ ವೈ.ಎಸ್.ವಿ. ದತ್ತ, ಸಂಸದ ಚಲುವರಾಯಸ್ವಾಮಿ ಹಾಗೂ ಇತರರು ಪ್ರಚಾರದ ಉಸ್ತುವಾರಿ ಹೊತ್ತಿದ್ದಾರೆ.












Click it and Unblock the Notifications