'ಕಳಂಕಿತ' ಪಾಟೀಲ್ ರಾಜೀನಾಮೆ: ಸರಕಾರದ ಮುಂದಿನ ನಡೆಯೇನು?

ಅತ್ತ, ರಾಜ್ಯಪಾಲರು ನ್ಯಾ. ಪಾಟೀಲ್ ರಾಜೀನಾಮೆಗೆ ಇನ್ನೂ ಅಂಗೀಕಾರ ಮುದ್ರೆ ಒತ್ತಿಲ್ಲ. ರಾಜೀನಾಮೆ ಅಂಗೀಕಾರವಾದ ನಂತರ ಅವರ ಸ್ಥಾನಕ್ಕೆ ಬೇರೆ ಯಾರನ್ನು ನೇಮಕ ಮಾಡಬೇಕು ಎಂದು ರಾಜ್ಯ ಸರ್ಕಾರ ವಿಚಾರ ನಡೆಸಬೇಕಿದೆ. ಈ ಕುರಿತು ಹೈಕಮಾಂಡ್ ನೆರವು ಕೋರಲು ಆಡಳಿತಾರೂಢ ಬಿಜೆಪಿ ತೀರ್ಮಾನಿಸಿದೆ.
ಒಂದು ವೇಳೆ ರಾಜ್ಯಪಾಲರು ರಾಜೀನಾಮೆ ಅಂಗೀಕರಿಸಿದರೆ, ತಕ್ಷಣವೇ ಹೊಸ ಲೋಕಾಯುಕ್ತರ ನೇಮಕ ಕುರಿತು ಪ್ರತಿಪಕ್ಷಗಳ ಮುಖಂಡರ ಅಭಿಪ್ರಾಯ ಪಡೆಯಲು ನಿರ್ಧರಿಸಲಾಗಿದೆ. ನಂತರ ಪಕ್ಷದ ಹೈಕಮಾಂಡ್ ಜತೆ ಚರ್ಚಿಸಿ, ಸೂಕ್ತ ವ್ಯಕ್ತಿಯನ್ನು ನೇಮಿಸಲು ತೀರ್ಮಾನಿಸಲಾಗಿದೆ ಎಂದು ಗೊತ್ತಾಗಿದೆ.
ಮುಖ್ಯಮಂತ್ರಿ ನೇತೃತ್ವದಲ್ಲಿ ಸೋಮವಾರ ಸಂಜೆ ಪ್ರಮುಖರ ಸಭೆ ನಡೆದಿತ್ತು. ಆಗ, ಪಾಟೀಲರ ರಾಜೀನಾಮೆಯನ್ನು ರಾಜ್ಯಪಾಲರು ಇನ್ನೂ ಅಂಗೀಕರಿಸಿಲ್ಲ. ಹೀಗಾಗಿ ಈಗಲೇ ಹೊಸ ಲೋಕಾಯುಕ್ತರ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡುವುದು ಬೇಡ ಎನ್ನುವ ತೀರ್ಮಾನಕ್ಕೆ ಸರ್ಕಾರ ಬಂದಿದೆ ಎನ್ನಲಾಗಿದೆ.












Click it and Unblock the Notifications