ರತ್ನಾಕರ ಶೆಟ್ಟಿ ಇನ್ನೂ ಸಿಕ್ಕಿಲ್ಲ; ಶೋಧಕ್ಕೆ ತಂಡ ರಚನೆ

ಆರೋಪಿಗಳ ಶೋಧಕ್ಕಾಗಿ ಲೋಕಾಯುಕ್ತ ಡಿವೈಎಸ್‌ಪಿ ಅಬ್ದುಲ್ ಅಹಮದ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಲೋಕಾಯುಕ್ತ ಇನ್ಸ್‌ಪೆಕ್ಟರುಗಳಾದ ಅನಿಲ್‌ಕುಮಾರ್ ಹಾಗೂ ರವಿಶಂಕರ್ ತಂಡದಲ್ಲಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.
ಶಿವಾಜಿನಗರದ ಟೈಲರಿಂಗ್ ಅಂಗಡಿಯ ಮಾಲೀಕ ನೂರ್ ಅಹ್ಮದ್ ಎಂಬವರಿಂದ ಐದು ಲಕ್ಷ ರೂ. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಲೋಕಾಯುಕ್ತ ಪೊಲೀಸರ ದಾಳಿಯ ಸುಳಿವನ್ನು ಅರಿತು ಠಾಣೆಯಿಂದಲೇ ಪರಾರಿಯಾಗಿದ್ದರು.
ಮೈಸೂರು, ತುಮಕೂರು, ಕೋಲಾರ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳಿ ಶೋಧ ಕಾರ್ಯ ಕೈಗೊಂಡಿರುವ ಲೋಕಾಯುಕ್ತ ಪೊಲೀಸರು, ಆರೋಪಿಗಳ ಸಂಬಂಧಿಕ ರಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಆರೋಪಿಗಳ ವಿರುದ್ಧ ಈಗಾಗಲೇ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಇಬ್ಬರನ್ನೂ ಕರ್ತವ್ಯದಿಂದ ಅಮಾನತುಗೊಳಿಸಿ ತಕ್ಷಣ ಆದೇಶ ಹೊರಡಿಸಿದ್ದಾರೆ.












Click it and Unblock the Notifications