ರೆಡ್ಡಿ ಪರಮಾಪ್ತರ ಮನೆ ಮೇಲೆ ಸಿಬಿಐ ದಾಳಿ
ಬಳ್ಳಾರಿ,
ಸೆ. 11: ಚಂಚಲಗುಡ ಜೈಲಿನಲ್ಲಿರುವ ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಬಿ. ಶ್ರೀನಿವಾಸರೆಡ್ಡಿಯ ಸಹೋದರ ಬಿ. ವೆಂಕಟರೆಡ್ಡಿಯ ಬ್ಯಾಂಕ್ ಖಾತೆಗಳು, ಲಾಕರ್‌ಗಳನ್ನು ಪ್ರಗತಿ ಗ್ರಾಮೀಣ ಬ್ಯಾಂಕ್‌ನ ಗಾಂಧಿನಗರ ಶಾಖೆಯ ಮೂಲಕ ಸಿಬಿಐ ಅಧಿಕಾರಿಗಳು ಭಾನುವಾರ ತೆಗೆಯಿಸುತ್ತಿದ್ದಾರೆ. id="toptextpromo">ಭಾನುವಾರ
ಬೆಳಗ್ಗೆ ೮ ಗಂಟೆ ಸುಮಾರಿಗೆ ಸಿಬಿಐ ಅಧಿಕಾರಿಗಳು ಬಳ್ಳಾರಿಯಲ್ಲಿ ಮತ್ತೊಮ್ಮೆ ದಾಳಿ ಪ್ರಾರಂಭಿಸಿದ್ದಾರೆ. ಬಿ. ಶ್ರೀರಾಮುಲು ಮತ್ತು ಜಿ. ಜನಾರ್ದನರೆಡ್ಡಿ ಅವರ ಆಪ್ತರಲ್ಲಿ ಗುರುತಿಸಿಕೊಂಡಿರುವ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗುರುಲಿಂಗನಗೌಡ ಮತ್ತು ಜಿಲ್ಲಾ ಪಂಚಾಯಿತಿಯ ಸ್ಥಾಯಿ ಸಮಿತಿ ಅಧ್ಯಕ್ಷ ಗೋನಾಳು ರಾಜಶೇಖರಗೌಡ ಹಾಗೂ ಭಾಸ್ಕರರೆಡ್ಡಿ ಅವರ ಮನೆಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಗೋನಾಳು
ರಾಜಶೇಖರಗೌಡ ಅವರು ಕಬ್ಬಿಣದ ಅದಿರನ್ನು ಝೀರೋ ಮೆಟೀರಿಯಲ್ (ಅಕ್ರಮ ಸಾಗಾಣಿಕೆ) ಮಾಡುತ್ತಿದ್ದ ಆರೋಪ ಎದುರಿಸುತ್ತಿದ್ದಾರೆ. ಇನ್ನು ಭಾಸ್ಕರ ರೆಡ್ಡಿ ಅವರು ಪಾರ್ವತಿ ಟ್ರಾನ್ಪೋರ್ಟ್ ಮೂಲಕ ಅದಿರನ್ನು ಸಾಗಿರುವ ವ್ಯವಹಾರ ಮಾಡಿ ಕೋಟ್ಯಾಂತರ ರೂಪಾಯಿ ಆದಾಯ ಗಳಿಸಿದ್ದಾರೆ ಎನ್ನಲಾಗಿದೆ. ಇಷ್ಟೇ ಅಲ್ಲದೇ, ಜಿ. ಜನಾರ್ದನರೆಡ್ಡಿ ಮತ್ತು ಬಿ. ಶ್ರೀರಾಮುಲು ಅವರ ಮನೆಯ ಮೇಲೆ ಸಿಬಿಐ ದಾಳಿ ನಡೆಸುವ ಪೂರ್ವದಲ್ಲಿ ಅನೇಕ ದಾಖಲಾತಿಗಳನ್ನು ಇವರ ಮನೆಗಳಲ್ಲಿ ಬಚ್ಚಿಟ್ಟಿದ್ದಾರೆ ಎಂದು ಹೇಳಲಾಗಿದೆ.











Click it and Unblock the Notifications