ಕಂಪ್ಯೂಟರ್ ಹಗರಣದಲ್ಲಿ ಯಡ್ಡಿ, ನೆತ್ತಿ ಮೆಲೆ ಸಿಬಿಐ ಕತ್ತಿ?

ddyurappa in computer Scam
ಬೆಂಗಳೂರು, ಸೆ.11 : ಹಗರಣಗಳ ಮಹರಾಜ ಮಾಜಿ ಸಿಎಂ ಯಡಿಯೂರಪ್ಪ ಅವರ ಮೇಲೆ ಸಿಬಿಐ ಕರಿನೆರಳು ಬೀಳುವ ಎಲ್ಲಾ ಸಾಧ್ಯತೆಗಳಿವೆ. ಭೂ ಹಗರಣ, ಅಕ್ರಮ ಗಣಿಗಾರಿಕೆ, ಭ್ರಷ್ಟಾಚಾರದ ಜೊತೆ ಈಗ ಕಂಪ್ಯೂಟರ್ ಹಂಚಿಕೆ ಅವ್ಯವಹಾರ ಅವರಿಗೆ ಶಾಕ್ ನೀಡಲಿದೆ.

ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯದ 4396 ಸರ್ಕಾರಿ ಪ್ರೌಢಶಾಲೆ 412 ಕೋಟಿ ರೂಪಾಯಿ ಮೊತ್ತದ ಕಂಪ್ಯೂಟರ್ ಪೂರೈಕೆ ಗುತ್ತಿಗೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ.

ಶಿಕ್ಷಣ, ಹಣಕಾಸು ಮತ್ತು ಇ- ಆಡಳಿತ ಇಲಾಖೆಯ ತೀವ್ರ ಆಕ್ಷೇಪ ಇದ್ದರೂ ಯಡ್ಡಿ ಅತಿ ಮುತುವರ್ಜಿಯಿಂದ ತಮಿಳುನಾಡಿನ ಎವೆರಾನ್ ಎಜ್ಯುಕೇಶನ್ ಪ್ರೈವೇಟ್ ಲಿಮಿಟೆಡ್ಡಿಗೆ ಕಂಪ್ಯೂಟರ್ ಸರಬರಾಜು ಗುತ್ತಿಗೆ ನೀಡಿದ್ದರು.

ಎವೆರಾನ್ ಅಸಲಿ ಬಣ್ಣ ಬಯಲು: ಕೋಟ್ಯಂತರ ರೂಪಾಯಿ ಅವ್ಯಹಾರ ಬೆಳಕಿಗೆ ಬರುತ್ತಲೇ ಆಗಸ್ಟ್ 31ರಂದು ಕಂಪೆನಿಯ ಆಡಳಿತ ನಿರ್ದೇಶಕ ಪಿ ಕಿಶೋರನನ್ನು ಆದಾಯ ತೆರಿಗೆ ಹೆಚ್ಚುವರಿ ಆಯುಕ್ತರಿಗೆ 50 ಲಕ್ಷ ರೂಪಾಯಿ ಲಂಚ ನೀಡಲು ಮುಂದಾದ ಸಂದರ್ಭದಲ್ಲಿ ಸಿಬಿಐ ಬಂಧಿಸಿದೆ. ಕಂಪನಿ ಷೇರುಗಳು 30-40 ಕೋಟಿ ರೂ.ಗೆ ಮಾರಾಟವಾಗಿದೆ

ಕಂಪ್ಯೂಟರ್ ಸರಬರಾಜು ಗುತ್ತಿಗೆ ಪಡೆವಲ್ಲಿ ಕಿಶೋರ್ ಕೆಲವು ಪ್ರಭಾವಿ ವ್ಯಕ್ತಿಗಳಿಗೆ ಲಂಚ ನೀಡಿದ್ದ ಎಂಬ ಆರೋಪವೂ ಇದೆ. ಈ ಹಿನ್ನೆಲೆಯಲ್ಲಿ ಸಿಬಿಐ ತುರ್ತು ತನಿಖೆ ನಡೆಸುತ್ತಿದೆ.

ಡಿಎಸ್‌ಇಆರ್‌ಟಿ 2008ರಲ್ಲಿ ಕಂಪ್ಯೂಟರ್ ಪೂರೈಕೆ ಯೋಜನೆ ರೂಪಿಸಿತ್ತು. 412 ಕೋಟಿ ರೂಪಾಯಿ ಮೊತ್ತದ ಯೋಜನೆಯನ್ನು ಇ-ಟೆಂಡರ್ ಕರೆದು ಅರ್ಹ ಗುತ್ತಿಗೆದಾರರಿಗೆ ನೀಡಲು ಶಿಕ್ಷಣ ಇಲಾಖೆ ಮತ್ತು ಡಿಎಸಿಆರ್‌ಟಿ ನಿರ್ಧರಿಸಿದ್ದರೂ ಇದಕ್ಕೆ ಯಡಿಯೂರಪ್ಪ ಬ್ರೇಕ್ ಹಾಕಿದ್ದರ.

ಶಿಕ್ಷಣ ಇಲಾಖೆಯೇ ಈ ಯೋಜನೆ ನಿರ್ವಹಿಸಿದರೆ ಎವೆರಾನ್ ಕಂಪೆನಿಯು ಕಿಯೋನಿಕ್ಸ್‌ಗೆ ಕೊಡಬೇಕಾಗಿರುವ ಶೇ 3ರಷ್ಟು ಕಮಿಶನ್ ಉಳಿಯುತ್ತಿತ್ತು. ಆದರೆ, ಕೆಲವು ಪ್ರಭಾವಿಗಳು ಯಡ್ಡಿ ಮೇಲೆ ಒತ್ತಡ ಹೇರಿ ಯೋಜನೆಯನ್ನು ಎವೆರಾನ್ - ಕಿಯೋನಿಕ್ಸ್‌ಗೆ ವಹಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಂಪ್ಯೂಟರ್ ಪೂರೈಕೆ ಹಗರಣ ಬೆಳಕಿಗೆ ಬರುತ್ತಲೇ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಗುತ್ತಿಗೆ ರದ್ದುಪಡಿಸುವಂತೆ ಮುಖ್ಯ ಕಾರ್ಯದರ್ಶಿಯವರಲ್ಲಿ ಮಾತುಕತೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+