ರೆಡ್ಡಿಗೆ ದೇವರು ಆರೋಗ್ಯ ನೀಡಲಿ: 'ಗೊಡ್ಡು ಸಾಹಿತಿ'ಯ ಶುಭ ಹಾರೈಕೆ

ಒಂದು ವೇಳೆ ಅನಾರೋಗ್ಯ ಉಂಟಾಗಿ, ಅದನ್ನೇ ಕಾರಣ ಮಾಡಿಕೊಂಡು ಜನಾರ್ದನ ರೆಡ್ಡಿಯವರು ಜೈಲಿನಿಂದ ಮುಕ್ತಿ ಪಡೆದು ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಆದರೆ ಅವರು ಬಹಳ ದಿನ ಜೈಲಿನಲ್ಲಿಯೇ ಇರಬೇಕಾದರೆ ಅವರ ಆರೋಗ್ಯವು ಬಹಳ ಕಾಲ ಸ್ಥಿರವಾಗಿರಬೇಕಾಗುತ್ತದೆ. ರೆಡ್ಡಿ ಸಹೋದರು ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸುವಂತಾಗಲಿ ಎಂದು ಹಿರಿಯ ಸಾಹಿತಿ ಯು.ಆರ್. ಅನಂತ ಮೂರ್ತಿ ವ್ಯಂಗ್ಯವಾಡಿದ್ದಾರೆ.
'ಅನಂತ ಮೂರ್ತಿಯವರು ತಮ್ಮ ಗೊಡ್ಡು ಸಾಹಿತ್ಯದ ಮೂಲಕ ಕಸದ ಬುಟ್ಟಿ ಸೇರುತ್ತಾರೆ' ಎಂದು ಜನಾರ್ದನ ರೆಡ್ಡಿ ಒಂದು ಕಾಲದಲ್ಲಿ ನನ್ನನ್ನು ಟೀಕಿಸಿದ್ದರು. ಹಂಪಿ ವಿ.ವಿ. ನನಗೆ ನಾಡೋಜ ಪ್ರಶಸ್ತಿ ನೀಡಲು ಮುಂದಾದಾಗ ಅದಕ್ಕೆ ಅಡ್ಡಿಪಡಿಸಿದ್ದರು. ಈಗ ಅವರೇ ಕಸದ ಬುಟ್ಟಿಗೆ ಸೇರಿದ್ದಾರೆ ಎಂದು ಮೂರ್ತಿ ಹೇಳಿದರು.
'ರಾಜ್ಯದ ಆಸ್ತಿಯನ್ನೇ ಕೊಳ್ಳೆ ಹೊಡೆದವರು, ರಾಜಕಾರಣಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಮಸಿ ಬಳಿದವರು, ಕರ್ನಾಟಕದ ಮರ್ಯಾದೆಯನ್ನು ಹಾಳು ಮಾಡಿದ ರೆಡ್ಡಿ ಸಹೋದರರಿಗೆ ಈಗ ತಕ್ಕ ಶಿಕ್ಷೆಯಾಗುತ್ತಿದೆ' ಎಂದು ಮೂರ್ತಿ ಹೇಳಿದರು.












Click it and Unblock the Notifications