ಬಿಜೆಪಿಗೆ ಕಿರಿಕಿರಿ ತಂದ ಅಡ್ವಾಣಿ ರಥ ಯಾತ್ರೆ!

2014ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಯಾರೊಬ್ಬರನ್ನೂ ಬಿಂಬಿಸದೇ ಕುತೂಹಲ ಉಳಿಸಿಕೊಂಡಿದ್ದ ಬಿಜೆಪಿಗೆ ಅಡ್ವಾಣಿ ಹೇಳಿಕೆಯಿಂದ ಇರುಸುಮುರುಸಾಗಿದೆ.
2ಜಿ, ಕಾಮನ್ವೆಲ್ತ್, ಏರ್ ಇಂಡಿಯಾ, ವೋಟಿಗಾಗಿ ನೋಟು ಮುಂತಾದ ಹಗರಣಗಳ ತನಿಖೆ ಕುಂಠಿತವಾಗಿದೆ. ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಚಳಿಗಾಲದ ಅಧಿವೇಶನದೊಳಗೆ ದೇಶಾದ್ಯಂತ ಭ್ರಷ್ಟಾಚಾರ ವಿರುದ್ಧ ರಥಯಾತ್ರೆ ನಡೆಸುತ್ತೇನೆ ಎಂದು ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಸದನದಲ್ಲಿ ಘೋಷಿಸಿದರು.
ಬಳ್ಳಾರಿಯಿಂದ ಆರಂಭ?: ಭ್ರಷ್ಟಾಚಾರದ ಮೂಲ ಬೇರು ಹೊಂದಿರುವ ಕರ್ನಾಟಕದ ಬಳ್ಳಾರಿಯಿಂದ ಅಡ್ವಾಣಿ ಅವರು ರಥ ಯಾತ್ರೆ ಆರಂಭಿಸಲಿ ಎಂದು ಬಿಜೆಪಿ ಸಂಸದರಲ್ಲಿ ಯಾರೊಬ್ಬರು ಧೈರ್ಯವಾಗಿ ಕೇಳಿಲ್ಲ.
ಆದರೆ, ಅಡ್ವಾಣಿ ಅವರ ರಥ ಬಳ್ಳಾರಿ ಗಣಿ ಧೂಳಿನಲ್ಲೂ ಚಲಿಸುವುದು ಗ್ಯಾರಂಟಿ ಎನ್ನಲಾಗಿದೆ. ಈ ನಡುವೆ ವೋಟಿಗಾಗಿ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವೋದ್ವೇಗಕ್ಕೆ ಒಳಗಾಗಿ ಹೇಳಿಕೆ ನೀಡುತ್ತಿರುವ ಅಡ್ವಾಣಿ ಅವರನ್ನು ಹತೋಟಿಗೆ ತರಲು ನಿತಿನ್ ಗಡ್ಕರಿ ಅಂಡ್ ಗ್ಯಾಂಗ್ ಶತಪ್ರಯತ್ನ ನಡೆಸಿದೆ.












Click it and Unblock the Notifications