ರೆಡ್ಡಿ ಇರೋ ಚಂಚಲಗುಡ ಜೈಲಿನ ಮೇಲೆ ಇಣುಕು ನೋಟ

Chanchalguda Central Jail
ಹೈದರಾಬಾದ್, ಸೆ.7: ಐತಿಹಾಸಿಕ ಚಂಚಲಗುಡ ಜೈಲಿಗೆ ಮತ್ತೆ ರಾಜಕಳೆ ಬಂದಿದೆ. ನಿಜಾಮರ ಕಾಲದ ಈ ಜೈಲಿನಲ್ಲಿ ನಟಿ ಮೋನಿಕಾ ಬೇಡಿ, ಸತ್ಯಂ ರಾಜು ನಂತರ ಗಣಿಧಣಿ ಜನಾರ್ದನ ರೆಡ್ಡಿ ಆಗಮನದಿಂದ ಮತ್ತೆ ಸುದ್ದಿಯಲ್ಲಿದೆ.

1876ರಲ್ಲಿ ನಿರ್ಮಾಣವಾದ ಈ ಜೈಲು ಐತಿಹಾಸಿಕವಾದರೂ ಮಾರ್ಡ್ರನ್ ಆಗಿಲ್ಲ. ಓಬೀರಾಯನ ಕಾಲದ ಕಟ್ಟಡದಲ್ಲಿ ಖೈದಿಗಳು ಕಿಕ್ಕಿರಿದುಕೊಂಡು ಜನಾರ್ದನ ರೆಡ್ಡಿ ಅವರನ್ನು ವೀಕ್ಷಿಸುತ್ತಿದ್ದದ್ದು, ಕನ್ನಡದ ಜನಪ್ರಿಯ ಚಿತ್ರದ ದೃಶ್ಯವನ್ನು ನೆನಪಿಸುವಂತಿತ್ತು.

ಸುಪ್ಪತ್ತಿಗೆ ಇಂದ ಕಲ್ಲು ಮಂಚಕ್ಕೆ ಜಾರಿದ ಜನಾರ್ದನ ರೆಡ್ಡಿ ಜೊತೆಗೆ ಸುಮಾರು 700ಕ್ಕೂ ಅಧಿಕ ಖೈದಿಗಳು ಈ ಜೈಲಿನಲ್ಲಿದ್ದಾರೆ. ಆದರೆ, ಈ ಜೈಲಿನಲ್ಲಿ 650 ಖೈದಿಗಳಿಗೆ ಮಾತ್ರ ಸ್ಥಳಾವಕಾಶವಿದೆ.

ನಿದ್ರೆ ಇರದ ರಾತ್ರಿಗಳು: ಹೊತ್ತು ಕಣ್ಣು ಮುಚ್ಚಿ ನೆಮ್ಮದಿಯಾಗಿ ನಿದ್ರಿಸುವಂತಿಲ್ಲ. ಏಕೆಂದರೆ ಕಾನೂನಿನ ಪ್ರಕಾರ ರಾತ್ರಿ ಸೆಲ್‌ನಲ್ಲಿ ಲೈಟ್‌ ಆರಿಸುವಂತಿಲ್ಲ. ಸೊಳ್ಳೆಗಳ ಕಾಟ ಬೇರೆ. ಬೇಲ್ ಮೇಲೆ ಆಸೆ ಇಟ್ಟುಕೊಂಡಿರುವುದರಿಂದ ವಿಶೇಷ ಸೌಲಭ್ಯಗಳಿಲ್ಲ. ಬೆಡ್, ಫುಡ್ ಸಿಕ್ಕಿಲ್ಲ.

ಬೆಳಗ್ಗೆ ಹೊತ್ತು ರೆಡ್ಡಿಗಳು ಹೊರಗೆ ತಿರುಗಾಡುವಂತಿಲ್ಲ. ಇತರೆ ಖೈದಿಗಳೊಡನೆ ಸಂಭಾಷಣೆ ನಡೆಸುವಂತಿಲ್ಲ. ಊಟ ತಿಂಡಿಗೆ ಸರತಿ ಸಾಲಿನಲ್ಲಿ ನಿಂತು ಕೈ ಒಡ್ಡ ಬೇಕು. ತಟ್ಟೆ, ಬಟ್ಟೆ ತಾವೇ ತೊಳೆದುಕೊಳ್ಳಬೇಕು.

ಕಡಪ ಕಲ್ಲು, ಕಬ್ಬಿಣ ಮುಟ್ಟಿ ಚಿನ್ನ ತೆಗೆಯುತ್ತಿದ್ದ ರೆಡ್ಡಿ ಈಗ ಕಲ್ಲುಹಾಸಿನ ಮೇಲೆ ಮಲಗಬೇಕು. ಮನವಿ ಸಲ್ಲಿಸಿದರೆ ಮನೆಯಿಂದ ಬೆಡ್, ಬೆಡ್ ಶೀಟ್ ಪಡೆಯಬಹುದು.

ಮನರಂಜನೆ: ನ್ಯೂಸ್ ಪೇಪರ್, ಟಿವಿ ವೀಕ್ಷಣೆಗೆ ಲಭ್ಯ. ಕೇರಂ, ಚೆಸ್, ಬಾಡ್ಮಿಂಟನ್ ಆಡಬಹುದು. ಪುಣ್ಯಕ್ಕೆ ಜೈಲಲ್ಲಿ ಶುದ್ಧೀಕರಿಸಿದ ನೀರನ್ನು ಎಲ್ಲಾ ಖೈದಿಗಳಿಗೂ ನೀಡಲಾಗುತ್ತಿದೆ.ಒಂದು ಹನಿ ಬಿಸ್ಲೇರಿ ನೀರು ಬೇಕೆಂದರೂ ಸಿಗುವುದಿಲ್ಲ. ವಾರದಲ್ಲಿ ನಿಗದಿತ ಬಾರಿ ಕುರುಕಲು ತಿಂಡಿ ತರಿಸಿಕೊಳ್ಳಬಹುದು.

ಅಂಗರಕ್ಷಕರ ಬೆಂಗಾವಲಲ್ಲಿ, ಐಷಾರಾಮಿ ಬಂಗಲೆ, ಕಾರು, ಹೆಲಿಕಾಪ್ಟರ್ ನಲ್ಲಿ ಸುತ್ತುತ್ತಾ ರಿಪಬ್ಲಿಕ್ ಆಫ್ ಬಳ್ಳಾರಿ ಆಳುತ್ತಿದ್ದ ಗಣಿಧಣಿ ಇಂದು 420 ಕೇಸ್ ನಲ್ಲಿ ಅಂದರ್ ಆಗಿರುವ ಖೈದಿಗಳಂತೆ ಕಾಲ ದೂಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+