ಶಿಕ್ಷಕಿಯ ಕೆನ್ನೆಗೆ ಬಾರಿಸಿ, ನಾಪತ್ತೆಯಾದ ವಿದ್ಯಾರ್ಥಿ
ನವದೆಹಲಿ,
ಸೆ.6: ಮೊನ್ನೆ ಶಿಕ್ಷಕರ ದಿನದಂದು ಇಡೀ ರಾಷ್ಟ್ರದಲ್ಲಿ ಶಾಲಾ ಮಕ್ಕಳು ಸಂಭ್ರಮಾಚರಣೆಯಲ್ಲಿರುವಾಗ ರಾಷ್ಟ್ರದ ರಾಜಧಾನಿಯಲ್ಲಿರುವ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಯೇ ಶಿಕ್ಷಕಿಗೆ ಶಿಕ್ಷೆ ನೀಡಿರುವ ಘಟನೆ ನಡೆದಿದೆ. ತನ್ನ ಕಾರಿಗೆ ದಾರಿ ಬಿಡಲಿಲ್ಲವೆಂದು ಶಿಕ್ಷಕಿಯು ವಿದ್ಯಾರ್ಥಿಯ ಮೇಲೆ ಗರಂ ಆಗಿದ್ದೇ ಬಂತು 10ನೇ ತರಗತಿಯ ವಿದ್ಯಾರ್ಥಿ ವಿಷ್ಣು, ತನ್ನ ಶಿಕ್ಷಕಿ ನಿಶಾ ಕಶ್ಯಪ್ ಅವರ ಕೆನ್ನೆಗೆ ಬಾರಿಸಿದ್ದಾನೆ. id="toptextpromo">ಆರ್
ಕೆ ಪುರಂನಲ್ಲಿರುವ ಜೋಸ್ ಮಾರುತಿ ಸರ್ವೋದಯ ವಿದ್ಯಾಲಯದ ಆವರಣದಲ್ಲಿ ನಿನ್ನೆ (ಸೆ.5) ಮಧ್ಯಾಹ್ನ ಈ ಘಟನೆ ನಡೆದಿದೆ. ಐಪಿಸಿ ಸೆಕ್ಷನ್ 323, 506 ಮತ್ತು 509 ಪ್ರಕರಣಗಳಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ, ತಮ್ಮ ಹುಡುಗ ವಿಷ್ಣು ಇನ್ನೂ ಮನೆಗೆ ಬಂದಿಲ್ಲ ಎಂದು ಪೋಷಕರು ಆತಂಕಕ್ಕೆ ಸಿಲುಕಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಏನಾತಯಿತೆಂದರೆ,
ಕಾರನ್ನು ರಿವರ್ಸ್ ತೆಗೆದುಕೊಳ್ಳುವಾಗ ವಿಷ್ಣು ಮತ್ತು ಅವನ ಸಂಗಡಿಗರು ಅಡ್ಡವಿದ್ದರು. ಪಕ್ಕಕ್ಕೆ ಸರಿಯುವಂತೆ ನಿಶಾ ಸೂಚಿಸಿದ್ದಾರೆ. ಆಗ ವಿಷ್ಣು, ನಿಶಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ. ಕಾರಿನಿಂದ ಇಳಿದ ನಿಶಾ, ವಿಷ್ಣುನನ್ನು ವಿಚಾರಿಸಿಕೊಂಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ವಿಷ್ಣು, ನಿಶಾ ಕೆನ್ನೆಗೆ ಮೂರು ಬಾರಿ ಬಾರಿಸಿ, ಪೊಲೀಸರಿಗೆ ಹೇಳ ಬೇಡ ಎಂದು ಜೀವ ಬೆದರಿಕೆಯೊಡ್ಡಿ, ಕಾಲ್ಕಿತ್ತಿದ್ದಾನೆ.











Click it and Unblock the Notifications