ರಾತ್ರಿ ಮೇಡಂ ಬರ್ತಾ ಇದ್ದಾರೆ, ದಾರಿ ಬಿಡಿ

ಸ್ಲೋವಾನ್ ಕೇಟರಿಂಗ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಸೋನಿಯಾ ಗಾಂಧೀ ಪಡೆದ ಚಿಕಿತ್ಸೆ ಬಗ್ಗೆ ಗುಟ್ಟು ಬಿಟ್ಟು ಕೊಡದ ಕಾಂಗ್ರೆಸ್, ಮಂಗಳವಾರ ರಾತ್ರಿ ಅವರು ಸ್ವದೇಶಕ್ಕೆ ಹಿಂದಿರುಗಲಿದ್ದಾರೆಂದು ಎಂದು ಮಾತ್ರ ತಿಳಿಸಿದೆ. ಅಣ್ಣಾ ಹೋರಾಟದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಅಕ್ಷರಶಃ ತಬ್ಬಿಬ್ಬಾಗಿತ್ತು.
ಹಲವಾರು ಕಾರಣಗಳಿಂದ ವಿಚಲಿತವಾಗಿರುವ ಯುಪಿಎಗೆ ಸೋನಿಯಾ ಆಗಮನ ಹೊಸ ಹುರುಪು ತಂದಿದೆ.
ಮೇಡಂ ಅನುಪಸ್ಥಿತಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಕಠಿಣ ನಿರ್ಧಾರ ತೆಗೆದು ಕೊಳ್ಳುವಲ್ಲಿ ಹಲವು ಬಾರಿ ವಿಫಲರಾಗಿದ್ದರು. ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ಸಿಂಗ್ ವಿರೋಧ ಪಕ್ಷದ ನಾಯಕರುಗಳಿಂದ ತೀವ್ರ ಟೀಕೆ ಎದುರಿಸಬೇಕಾಯಿತು. ರಾಹುಲ್ ಗಾಂಧಿ ಕೂಡಾ ವಿಪತ್ತು ನಿರ್ವಹಣೆಯಲ್ಲಿ ವಿಫಲಾಗಿದ್ದರು.












Click it and Unblock the Notifications