ಮಣಿಪಾಲದಲ್ಲಿ ಮಿಲಿಟರಿ ಕಾಮಣ್ಣರ ಬಂಧನ

ಮುಂಬೈನಲ್ಲಿ ನೆಲೆಸಿರುವ ಮತ್ತು ಮೂಲತಃ ಉಡುಪಿ ಜಿಲ್ಲೆಯ ಬೆಳ್ಮಣ್ ನಿವಾಸಿ ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳಾದ ಸುಜಿತ್ ಟಿವಿ (ಮಲ್ಲಪುರಂ ಜಿಲ್ಲೆ), ದೀಪೇಶ್ (ಕಾಸರಗೋಡು), ಆನಂದ್ ಕೆ (ಅಲೆಪ್ಪಿ), ಸಂತೋಷ್ (ಕಲ್ಲಿಕೋಟೆ) ಹಾಗೂ ದೀಪೇಶ್ (ಕೊಳಿಕೋಡ್) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯಿಂದ ಉಡುಪಿಗೆ ಬರಲು ಶನಿವಾರ ಮಂಗಳ ರೈಲು ಹತ್ತಿದ್ದ ಮಹಿಳೆಗೆ ಆರೋಪಿಗಳು ಲೈಂಗಿಕ ಕಿರುಕುಳ ನೀಡುತ್ತಿದ್ದರೆಂದೂ ದೂರಲಾಗಿದೆ. ಹತ್ತು ಹನ್ನೆರಡು ಮಂದಿಯಿದ್ದ ತಂಡ ನಿರಂತರವಾಗಿ ಕಿರುಕುಳ ನೀಡುತ್ತಿತ್ತೆಂದೂ ಸೋಮವಾರ ರೈಲು ಬೈಂದೂರು ದಾಟಿ ಬರುತ್ತಿದ್ದಂತೆಯೇ ಆರೋಪಿಗಳು ಕಿರುಕುಳ ತೀವ್ರಗೊಳಿಸಿದಾಗ ಮಹಿಳೆ ಮಣಿಪಾಲ ರೈಲ್ವೇ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ತಕ್ಷ್ಣಣ ಪೊಲೀಸರು ಕಾರ್ಯಾಚರಣೆಗಿಳಿದು ಐದು ಮಂದಿ ಕಾಮುಕರನ್ನು ಸೆರೆ ಸಿಕ್ಕಿದರು. ಉಳಿದವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಘಟನೆಯ ಮಾಹಿತಿ ತಿಳಿದ ಸ್ಥಳೀಯರು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಿಗಳನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.












Click it and Unblock the Notifications