ಗುಡ್ ಬೈ ಬೇಡ: ಶ್ರೀರಾಮುಲುಗೆ ಪ್ರಧಾನ್ ಫೋನ್

'ಯಾವುದೇ ಆತುರದ ನಿರ್ಧಾರ ಬೇಡ. ಮಾತುಕತೆ ಮೂಲಕ ಎಲ್ಲ ವಿಷಯ ಬಗೆಹರಿಸಿಕೊಳ್ಳೋಣ. ಸಮಯಾವಕಾಶ ನೀಡಿ. ನಾನೇ ಬೆಂಗಳೂರಿಗೆ ಬಂದು ನಿಮ್ಮೊಂದಿಗೆ ಮಾತನಾಡುವೆ' ಎಂದು ಧರ್ಮೇಂದ್ರ ಪ್ರಧಾನ್ ಅವರು ರೆಡ್ಡಿ ಸೋದರರಿಗೆ ಮನವಿ ಮಾಡಿದ್ದಾರೆ.
ಬಿಜೆಪಿ ವರಿಷ್ಠರ ಸೂಚನೆಯಂತೆ ಪ್ರಧಾನ್ ಅವರು ರೆಡ್ಡಿ ಸೋದರರಿಗೆ ಫೋನ್ ಮಾಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಲೋಕಾಯುಕ್ತ ವರಿದಯನ್ನೇ ಅಸ್ತ್ರವಾಗಿಸಿಕೊಂಡು ರೆಡ್ಡಿ ಸೋದರರನ್ನು ಹಣಿಯಬೇಕೆಂಬ ಲೆಕ್ಕಾಚಾರದಲ್ಲಿದ್ದ ಬಿಜೆಪಿ ಹೈಕಮಾಂಡಿಗೆ ಇದರಿಂದ ಹಿನ್ನಡೆಯಾಗಿದೆ ಎನ್ನಬಹುದು.
ಈ ಮಧ್ಯೆ, ಪೂರ್ವನಿಗದಿತ ಸುದ್ದಿಗೋಷ್ಠಿ ನಡೆಸದೆ ಶ್ರೀರಾಮುಲು ತಮ್ಮ ಹೆಜ್ಜೆ ಹಿಂದಿಕ್ಕುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಶ್ರೀರಾಮುಲು ಬಾಂಬು ಠುಸ್ಸೆನ್ನುತ್ತದಾ ಎಂಬುದಕ್ಕೆ ಕೆಲವೇ ಕ್ಷಣಗಳಲ್ಲಿ ಉತ್ತರ ದೊರಕಲಿದೆ.












Click it and Unblock the Notifications